ನ್ಯೂಸ್

ಎಮ್ಮೆಗಳಿಗೆ ನೀರು ಕುಡಿಸಲೆಂದು ಹೋದ ಮಕ್ಕಳ ದಾರುಣ ಸಾವು

ಬಳ್ಳಾರಿ: ಇಬ್ಬರು ಮಕ್ಕಳು ಎಮ್ಮೆಗಳಿಗೆ ನೀರು ಕುಡಿಸಲೆಂದು ಅವುಗಳನ್ನು ಕರೆದುಕೊಂಡು ತುಂಗಭದ್ರಾ ನದಿಗೆ ಹೋಗಿದ್ದರು. ಆದರೆ ಅವರಿಬ್ಬರ ಸಾವೂ ಅಲ್ಲೇ ಇತ್ತು.

ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರದ 2ನೇ ಗ್ರಾಮದ ಬಳಿಯಿರುವ ಟಿಬಿ ಡ್ಯಾಂ ಹಿನ್ನೀರಿನಲ್ಲಿ ಘಟನೆ ನಡೆದಿದೆ. ಗಗನಾ(13), ಬಾಲಕ ಗೌತಮ್ (12) ಮೃತ ಮಕ್ಕಳು.

ಎಮ್ಮೆಗಳಿಗೆ ನೀರು ಕುಡಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಇಬ್ಬರ ಶವವನ್ನೂ ಸ್ಥಳೀಯ ಈಜುಗಾರರು ಹೊರತೆಗೆದಿದ್ದಾರೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದ್ದು, ತಂಬ್ರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.