ಮುಂಬೈ: ಯೂಟ್ಯೂಬ್ ನ್ಯೂಸ್ ಚಾನೆಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತನಿಗೆ ಆಟೋ ಮೀಟರ್ ದರದ ವಿಚಾರಕ್ಕೆ ಥಳಿಸಿದ ಇಬ್ಬರು ಚಾಲಕರನ್ನು ಇದೀಗ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕಡಿಮೆ ವೆಚ್ಚದಲ್ಲಿ ಹೆಚ್ಚು ಮಾಹಿತಿ ನೀಡುವ ಮಿತ್ರ; ಕುಣಿಮೆಳ್ಳಿಹಳ್ಳಿಯಲ್ಲಿ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ವಿತರಣೆ
ಘಟನೆಯ ವಿವರ: ಮಂಗಳವಾರ (ಆಗಸ್ಟ್ 02) ರಾತ್ರಿ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಪತ್ರಕರ್ತರೊಬ್ಬರು ತಮ್ಮನ್ನು ಕುರ್ಲಾ ರೈಲು ನಿಲ್ದಾಣಕ್ಕೆ ಬಿಡುವಂತೆ ಆಟೋ ಚಾಲಕನಿಗೆ ತಿಳಿಸಿದ್ದಾರೆ. ಆದ್ರೆ, ಡ್ರೈವರ್ ಶೇರಿಂಗ್ ಆಧಾರದ ಮೇಲೆ ಹಣ ಕೊಡಬೇಕೇ ಹೊರತು ಮೀಟರ್ ಪ್ರಕಾರವಲ್ಲ ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ಶುರುವಾಗಿದೆ. ಮಾತಿನ ಜಟಾಪಟಿ ತಾರಕಕ್ಕೇರುತ್ತಿದ್ದಂತೆ ಪತ್ರಕರ್ತರು, ಹತ್ತಿರದ ಬಿಕೆಸಿ ಪೊಲೀಸ್ ಠಾಣೆಗೆ ಆಟೋವನ್ನು ಓಡಿಸಲು ಒತ್ತಾಯಿಸಿದ್ದಾರೆ. ಆದ್ರೆ, ಇದಕ್ಕೆ ಒಪ್ಪದ ಚಾಲಕ, ಮತ್ತೊಬ್ಬ ಆಟೋ ಚಾಲಕನನ್ನು ಹತ್ತಿಸಿಕೊಂಡು, ಇಬ್ಬರೂ ಸೇರಿ ವ್ಯಕ್ತಿಗೆ ಥಳಿಸಿ, ಅವರಿಂದ 100 ರೂ. ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: HC Balakrishna Hints Dissidence In Congress |ಕಾಂಗ್ರೆಸ್ನಲ್ಲಿನ ಅಸಮಾಧಾನದ ಬಗ್ಗೆ ಎಚ್.ಸಿ. ಬಾಲಕೃಷ್ಣ ಮಾಹಿತಿ
ಈ ಘಟನೆ ಕುರಿತು ಪತ್ರಕರ್ತರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಬೆನ್ನಲ್ಲೇ ಆರೋಪಿಗಳನ್ನು ಭಾರತ್ ನಗರ ಪ್ರದೇಶದಿಂದ ಬಂಧಿಸಿದ ಪೊಲೀಸರು, ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಸಿಕೊಂಡಿದ್ದಾರೆ,(ಏಜೆನ್ಸೀಸ್).