ನ್ಯೂಸ್

ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಇಬ್ಬರು ಅರೆಸ್ಟ್!​​ Ramya

ಬೆಂಗಳೂರು:  ನಟಿ ರಮ್ಯಾಗೆ  (Ramya) ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಪ್ರಕರಣದಲ್ಲಿ ಸೈಬರ್ ಕ್ರೈಮ್ ಪೊಲೀಸರು  ಇಬ್ಬರನ್ನು ಬಂಧಿಸಿದ್ದು, ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಳ್ಳಾರಿ ಮೂಲದ ಓರ್ವ, ಚಿತ್ರದುರ್ಗ ಮೂಲದ ಓರ್ವನ ಬಂಧನ ಆಗಿದೆ. ಈ ಪ್ರಕರಣದಲ್ಲಿ ಇನ್ನೂ ಹೆಸರು ದಾಖಲಾಗಿದೆ. ಅವರ ಹುಡುಕಾಟ ನಡೆಯುತ್ತಿದೆ. ಹೀಗಾಗಿ, ಅನೇಕರಿಗೆ ನಡುಕ ಶುರುವಾಗಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು ಸೋಷಿಯಲ್ ಮೀಡಿಯಾ ಐಡಿಗಳ ಮೂಲಕ ಮೂವರನ್ನು ಪತ್ತೆ ಮಾಡಿದ್ದಾರೆ.

ನಟಿ​ ರಮ್ಯಾ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ರಮ್ಯಾ ಟ್ವೀಟ್​ ಮಾಡಿದ್ದರು.  ರಮ್ಯಾ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರು. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ರಮ್ಯಾ ಅವರು ಮುಂದಾಗಿದ್ದು, ಇದೀಗ ಪೊಲೀರು ತನಿಖೆ ಕೈಗೊಂಡಿದ್ದರು.