ನ್ಯೂಸ್

ಸರ್ಕಾರಿ, ವಾಣಿಜ್ಯ ಸಂಸ್ಥೆಗಳಿಗೆ ಟ್ವಿಟರ್​ ಶುಲ್ಕ?

ನ್ಯೂಯಾರ್ಕ್​: ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಸಾಂಕೇತಿಕ ಶುಲ್ಕ ವಿಧಿಸಲಾಗುವುದೆಂದು ಟ್ವಿಟರ್​ ಮಾಲೀಕ ಎಲನ್​ ಮಸ್ಕ್​ ಹೇಳಿದ್ದಾರೆ. ಆದರೆ ಸಾಮಾನ್ಯ ಬಳಕೆದಾರರಿಗೆ ಉಚಿತವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಕ್ರೋಬ್ಲಾಗಿಂಗ್​ ವೇದಿಕೆ ಟ್ವಿಟರ್​ನ್ನು 3,365 ಕೋಟಿ ರೂಪಾಯಿಗೆ ಮಸ್ಕ್​ ಖರೀದಿಸಿದ್ದಾರೆ. ಹೊಸ ಫೀಚರ್​ಗಳ ಸೇರ್ಪಡೆಯೊಂದಿಗೆ ಹಲವಾರು ಬದಲಾವಣೆಗಳನ್ನು ತರಲು ಅವರು ಯೋಜಿಸಿದ್ದಾರೆ. ನ್ಯೂಯಾರ್ಕ್​ನಲ್ಲಿ ನಡೆದಿದ್ದ ವಾರ್ಷಿಕ ಮೆಟ್​ ಗಲಾದಲ್ಲಿ ಮಾತನಾಡಿದ ಮಸ್ಕ್​, ಟ್ವಿಟರ್​ಅನ್ನು ಪಾರದರ್ಶಕಗೊಳಿಸುವ ಆಶಯ ವ್ಯಕ್ತಪಡಿಸಿದ್ದರು. ಈ ನಡುವೆ, ಟ್ವೀಟ್​ಗಳಲ್ಲಿ ಆಗಿರುವ ತಪು$್ಪಗಳನ್ನು ತಿದ್ದಲು ಬಳಕೆದಾರರಿಗೆ ಅನುಕೂಲವಾಗುವಂತೆ ಎಡಿಟ್​ ಬಟನ್​ ಪರಿಚಯಿಸಲು ಟ್ವಿಟರ್​ ಯೋಜಿಸುತ್ತಿದೆ.