ಬಂಧಿತ ಆರೋಪಿಗಳು 
ನ್ಯೂಸ್

ಕಿರುತೆರೆ ನಟ ಸೇರಿ ಮೂವರ ಬಂಧನ; 13 ಲಕ್ಷ ಮೌಲ್ಯದ ಮಾದಕ ಪದಾರ್ಥ ಜಪ್ತಿ

ಬೆಂಗಳೂರು: ಕಿರುತೆರೆ ನಟ ಸೇರಿದಂತೆ ಕೇರಳ ಮೂಲದ ಮೂವರು ಮಾದಕ ವಸ್ತು ದಂಧೆಕೋರರನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶಿಯಾಜ್, ಮಹಮ್ಮದ್ ಶಾಹಿದ್, ಮಂಗಲ್ ತೋಡಿ ಜಿತೀನ್ ಬಂಧಿತ ಆರೋಪಿಗಳು. ಬಂಧಿತರಿಂದ 191 ಗ್ರಾಂ. ಎಂಡಿಎಂಎ ಹಾಗೂ 2.80ಕೆಜಿ‌ ಗಾಂಜಾ ವಶಕ್ಕೆ ಪಡೆಲಾಗಿದೆ.

ಶಿಯಾಜ್ ಮಲಯಾಳಂ ಕಿರುತೆರೆಯಲ್ಲಿ ಸಹನಟನಾಗಿ ಕೆಲಸ ಮಾಡಿಕೊಂಡಿದ್ದ. ಮಹಮ್ಮದ್ ಶಾಹಿದ್ ಮೊಬೈಲ್ ಅಂಗಡಿ‌ಯಲ್ಲಿ‌ ಕೆಲಸ ಮಾಡಿಕೊಂಡಿದ್ದ. ಬಂಧಿತರಿಂದ 13 ಲಕ್ಷ ಮೌಲ್ಯದ ಮಾದಕ ಪದಾರ್ಥ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲು