ನ್ಯೂಸ್

ಜಿಮ್​ಗೆ ಎಂಟ್ರಿ ಕೊಟ್ಟ ಮರಿಯಾಮೆ; ಮ್ಯಾನೇಜರ್​ ಫುಲ್​​ ಸುಸ್ತು....

ಅಮೆರಿಕ: ಜಿಮ್​ಗೆ ನರ ಮನುಷ್ಯರು ಫಿಟ್​ ಆಗಿರಲು ಹೋಗುವುದನ್ನು ಕೇಳಿದ್ದೇವೆ. ಆದರೆ ಇದೆ ಮೊದಲ ಬಾರಿಗೆ ಆಮೆಯೊಂದು ಜಿಮ್​​ಗೆ ಎಂಟ್ರಿ ಕೊಟ್ಟಿದೆ. ಈ ಆಮೆ ಯಾಕೆ ಜಿಮ್​ಗೆ ಬರುತ್ತದೆ ಎಂದು ಯೋಚನೆ ಮಾಡುತ್ತಾ ಇದ್ದೀರಾ? ಹಾಗಿದ್ರೆ ಈ ವಿಡಿಯೋವನ್ನು ನೀವು ನೋಡಲೇ ಬೇಕು.

ಫ್ಲೋರಿಡಾದ ಪೋರ್ಟ್ ಸೇಂಟ್ ಲೂಸಿಯಲ್ಲಿರುವ ಜಿಮ್‌ಗೆ ಈ ಆಮೆ ಬಂದಿದೆ. ಜಿಮ್​ನ ಮ್ಯಾನೇಜರ್​ ಆಮೆಯನ್ನು ನೋಡಿ ಅಚ್ಚರಿಗೆ ಒಳಗಾಗಿದ್ದಾಳೆ. ಜಿಮ್ ತುಂಬ ಮೆಲ್ಲಗೆ ಓಡಾಡುತ್ತ ಆಕೆಯನ್ನು ಸರಿಯಾಗಿ ವ್ಯಾಯಾಮವನ್ನೂ ಮಾಡಿಸಿದೆ.

ಆಕೆ ಅದನ್ನು ಪುಟ್ಟ ಟವೆಲ್​ನಿಂದ ಹಿಡಿಯಲು ಪ್ರಯತ್ನಿಸಿದ್ದಾಳೆ. ಆಕೆಯ ಕಾಟವನ್ನು ತಡೆಯಲಾರದೆ ಬೇಸತ್ತು ತಂತಾನೇ ಜಿಮ್​ನ ಗ್ಯಾರೇಜ್​ನ ಬಾಗಿಲಿನಿಂದ ಹೊರಹೋಗಿದೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್​​ ಮಾಡುವ ಮೂಲಕವಾಗಿ ತಮಾಷೆ ಮಾಡುತ್ತಿದ್ದಾರೆ.