ನ್ಯೂಸ್

ಜಾರ್ಜಿಯಾದಲ್ಲಿ 20 ಜನರಿದ್ದ ಟರ್ಕಿಶ್ ಮಿಲಿಟರಿ ವಿಮಾನ ಪತನ; ಎಲ್ಲರೂ ಮೃತಪಟ್ಟಿರುವ ಶಂಕೆ| Plane crashes

Plane crashes: ಜಾರ್ಜಿಯಾದಲ್ಲಿ ಸಿಬ್ಬಂದಿ ಸೇರಿ 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಟರ್ಕಿಶ್ ಮಿಲಿಟರಿ ಸರಕು ವಿಮಾನವೊಂದು ಪತನವಾಗಿದ್ದು, ಅದರಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆದಿದೆ ಎಂದು ಇಂದು (ನ. 11) ವರದಿಯಾಗಿದೆ.

ಅಜೆರ್ಬೈಜಾನ್ ಮಾಧ್ಯಮಗಳಲ್ಲಿ ವಿಮಾನ ಪತನದ ದೃಶ್ಯಗಳು ಪ್ರಸಾರವಾಗಿದ್ದು, ವಿಮಾನವು ಆಕಾಶದಿಂದ ಕೆಳಗೆ ಬೀಳುತ್ತಿದ್ದಂತೆ ಅಡ್ಡಲಾಗಿ ತಿರುಗುತ್ತಿರುವುದನ್ನು ತೋರಿಸುತ್ತವೆ. ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ದೊಡ್ಡದಾಗಿ ಬೆಂಕಿಯ ಕಪ್ಪು ಹೊಗೆಯನ್ನು ಹರಡಿರುವುದು ವಿಡಿಯೋದಲ್ಲಿದೆ.

ವಿಮಾನ ಪತನವನ್ನು ದೃಢಪಡಿಸಿರುವ ಟರ್ಕಿಶ್ ರಕ್ಷಣಾ ಸಚಿವಾಲಯ, ಅಜೆರ್ಬೈಜಾನ್‌ನಿಂದ ವಾಪಸ್ ದೇಶಕ್ಕೆ ಬರುತ್ತಿದ್ದ ನಮ್ಮ ಸಿ-130 ಮಿಲಿಟರಿ ಸರಕು ವಿಮಾನವು ಜಾರ್ಜಿಯಾ-ಅಜೆರ್ಬೈಜಾನ್ ಗಡಿಯಲ್ಲಿ ಅಪಘಾತಕ್ಕೀಡಾಗಿದೆ. ವಿಮಾನ ಸಿಬ್ಬಂದಿ ಸೇರಿದಂತೆ 20 ಸಿಬ್ಬಂದಿ ವಿಮಾನದಲ್ಲಿದ್ದರು. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದೆ. (ಏಜೆನ್ಸೀಸ್)