ನ್ಯೂಸ್

ಬಿಲ್​ ವಿಚಾರಕ್ಕೆ ಗಲಾಟೆ; ಬ್ರಿಟಿಷ್​​ ಪ್ರವಾಸಿಗರ ಮೇಲೆ ಹಲ್ಲೆ: ವಿಡಿಯೋ ವೈರಲ್​ | British

British: ನೈಋತ್ಯ ಟರ್ಕಿಯಲ್ಲಿರುವ ಮಾರ್​ಮಾರಿಸ್​ ಬಾರ್​ನಲ್ಲಿ ಬಿಲ್​ ವಿಷಯಕ್ಕೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಬ್ರಿಟಿಷ್​ ಪ್ರವಾಸಿಗರ ಗುಂಪಿನ ಮೇಲೆ ಅಲ್ಲಿನ ಬೌನ್ಸರ್ಸ್​ಗಳು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲೇನಿದೆ?

ವೈರಲ್​ ಆಗಿರುವ ವೀಡಿಯೋದಲ್ಲಿ, ''ಇಬ್ಬರು ಮಹಿಳೆಯರು ಸೇರಿ ಒಬ್ಬ ಪುರುಷ ಕೂತಿದ್ದ ಟೇಬಲ್​ ಬಳಿ ಬಿಲ್​ ವಿಚಾರಕ್ಕೆ ಗಲಾಟೆ ನಡೆದಿದ್ದು, ಬಳಿಕ ಬಂದ 5 ಜನ ಬೌನ್ಸರ್ಸ್​ಗಳು ಏಕಾಏಕಿ ಅವರ ಮೇಲೆ ದಾಳಿ ಮಾಡಿ, ಮನಬಂದಂತೆ ಹಲ್ಲೆ ಮಾಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ''.

ಮೊದಲಿಗೆ ಈ ಹೊಟೇಲ್​ನಲ್ಲಿ ಬಿಲ್​ ವಿಚಾರಕ್ಕೆ ಜಗಳ ಪ್ರಾರಂಭವಾಗಿ ನಂತರ ಇದು ಹಿಂಸಾಚಾರವಾಗಿ ಬದಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ. ಈ ದೃಶ್ಯಾವಳಿಗಳು ಗುಂಪಿನಲ್ಲಿದ್ದ ಪ್ರವಾಸಿಗನ ಮೇಲೆ ಬೌನ್ಸರ್‌ಗಳು ಹಲ್ಲೆ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ಗಲಾಟೆ ಬಿಡಿಸಲು ಬಂದ ಇಬ್ಬರ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ.(ಏಜೆನ್ಸೀಸ್​)