ನ್ಯೂಸ್

ವಿವಿಗಳು ರಾಷ್ಟ್ರ ನಿರ್ಮಾಣದ ಅಡಿಪಾಯಗಳು

ತುಮಕೂರು: ವಿಶ್ವವಿದ್ಯಾಲಯಗಳು ರಾಷ್ಟ್ರ ನಿರ್ಮಾಣದ ಅಡಿಪಾಯಗಳು. ವಿವಿಗಳು ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಸ್ಫೂರ್ತಿಯ ಚಿಲುಮೆಗಳ ಸಂಕೇತ ಎಂದು ಇಸ್ರೋ ವಿಶ್ರಾಂತ ಅಧ್ಯಕ್ಷ, ರಾಜಸ್ಥಾನ ಕೇಂದ್ರೀಯ ವಿಶ್ವವಿದ್ಯಾಲಯ ಕುಲಾಧಿಪತಿ ಡಾ.ಕೆ.ಕಸ್ತೂರಿರಂಗನ್ ಹೇಳಿದರು.

ವಿವಿಯ 14ನೇ ಘಟಿಕೋತ್ಸವ ಭಾಷಣದಲ್ಲಿ ಹೊಸ ಆಲೋಚನೆಗಳು ಮತ್ತು ಜ್ಞಾನವನ್ನು ಉತ್ಪಾದಿಸಲು ಹಾಗೂ ಪ್ರಸಾರ ಮಾಡುವ ದೀರ್ಘಕಾಲಿಕ ಮೂಲಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸಮಕಾಲೀನ‌ ಜಗತ್ತಿನಲ್ಲಿ ಉನ್ನತ ಕಲಿಕೆಗೆ ಅವಕಾಶಗಳನ್ನು ಒದಗಿಸುವ ಸಂಸ್ಥೆಗಳ ಮಾದರಿಗಳಲ್ಲಿ, ವಿವಿಗಳು

ಸಮಯ , ಪರೀಕ್ಷಿತ ವಿಧಾನಗಳು ಹಾಗೂ ಮೌಲ್ಯ ವ್ಯವಸ್ಥೆಗಳೊಂದಿಗೆ ಕೇಂದ್ರ ಸ್ಥಾನವನ್ನು ಪಡೆದಿವೆ ಎಂದರು.

ಆಧುನಿಕ ಮತ್ತು ಸಂಕೀರ್ಣ ಪ್ರಪಂಚದ ಸಮಗ್ರ ದೃಷ್ಡಿಕೋನದ ಅಭಿವೃದ್ಧಿಗೆ ನಿರ್ಣಾಯಕ ಅಂಶವಾದ ವೈವಿಧ್ಯಮಯ ವಿಭಾಗಗಳ ನಡುವಿನ ಪರಸ್ಪರ ಕ್ರಿಯೆಗೆ ಅವು ಪರಿಣಾಮಕಾರಿ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತವೆ ಎಂದು ತಿಳಿಸಿದರು.

ಜ್ಞಾನ ಮತ್ತು ಚಿಂತನೆಯ ಕಡೆಗಿನ ನಿರಂತರ ಹುಡುಕಾಟವು ನಮ್ಮ ಬೌದ್ಧಿಕ ಪರಂಪರೆಯ ವಿಶಿಷ್ಟ ಲಕ್ಷಣವಾಗಿದೆ. ಉನ್ನತ ಶಿಕ್ಷಣವು ಸದಾ ಒಂದು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ಸಮಾಜದ ಕಾರ್ಯಾಚರಣೆ ಅಗತ್ಯಗಳನ್ನು ಪೂರೈಸಲು

ಇದು ನಿರಂತರವಾಗಿ ಸುಧಾರಣೆ, ವಿಕಸನ ಮತ್ತು ವೈವಿಧ್ಯತೆಯನ್ನು ಹೊಂದುತ್ತಿರಬೇಕು ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ತನ್ನದೇ ಆದ ದೃಷ್ಟಿಕೋನ ಹೊಂದಿದೆ. 21 ನೇ ಶತಮಾನದ ಶೈಕ್ಷಣಿಕ ಗುರಿಗಳಿಗೆ ಮತ್ತು ಭಾರತದ ಮೌಲ್ಯವ್ಯವಸ್ಥೆಗೆ ಅನುಗುಣವಾದ ವ್ಯವಸ್ಥೆಯೊಂದನ್ನು ರೂಪಿಸುವುದು ಈ ಕಾರ್ಯತಂತ್ರದ ಉದ್ದೇಶವಾಗಿದೆ. ಶಿಕ್ಷಣದೆಡೆಗೆ ಸಮಗ್ರವಾದ ನಮನೀಯವಾದ ದೃಷ್ಟಿಕೋನವನ್ನು ಒದಗಿಸುತ್ತದೆ. ದೇಶದ ಶೈಕ್ಷಣಿಕ ನೀಲನಕಾಶೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರಂತರತೆ, ಸುಸಂಬದ್ಧತೆ ಮತ್ತು ಪ್ರಕ್ರಿಯೆಗಳನ್ನು ಸಾಧ್ಯವಾಗಿಸುವುದನ್ನು ಇದು ಗಮನದಲ್ಲಿಟ್ಟುಕೊಂಡಿದೆ ಎಂದು ಕಸ್ತೂರಿರಂಗನ್ ಭರವಸೆ ವ್ಯಕ್ತಪಡಿಸಿದರು.