ನ್ಯೂಸ್

23ರಂದು ಪಿಂಚಣಿ ಅದಾಲತ್​

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅ.23 ರಂದು ಜಿಲ್ಲೆಯ 10 ಗ್ರಾಪಂಗಳಲ್ಲಿ ಪಿಂಚಣಿ ಅದಾಲತ್​ ಹಮ್ಮಿಕೊಳ್ಳಲಾಗಿದೆ.


ಅದಾಲತ್​ನಲ್ಲಿ ಪಿಂಚಣಿಗೆ ಸಂಬಂಧಿಸಿದಂತೆ ಫಲಾನುಭವಿಗಳ ಕುಂದು-ಕೊರತೆ ಆಲಿಸಲಾಗುತ್ತಿದೆ.

ಅ.23ರಂದು ಜಿಲ್ಲೆಯ ಶಿರಾ ತಾಲೂಕು ತಡಕಲೂರು, ತುರುವೇಕೆರೆ ತಾಲೂಕು ಲೋಕಮ್ಮನಹಳ್ಳಿ, ತಿಪಟೂರು ತಾಲೂಕು ಹಿಂಡಿಸ್ಕೆರೆ, ಮಧುಗಿರಿ ತಾಲೂಕು ಚಿಕ್ಕಮಾಲೂರು, ತುಮಕೂರು ತಾಲೂಕು ಡಿ.ಗೊಲ್ಲಹಳ್ಳಿ, ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ, ಕುಣಿಗಲ್​ ತಾಲೂಕು ಹುಲಿಯೂರುದುರ್ಗ, ಕೊರಟಗೆರೆ ತಾಲೂಕು ಹೊಳವನಹಳ್ಳಿ, ಪಾವಗಡ ತಾಲೂಕು ನ್ಯಾಯದಗುಂಟೆ, ಗುಬ್ಬಿ ತಾಲೂಕು ಅಂಕಸಂದ್ರ 10 ಗ್ರಾಪಂಗಳಲ್ಲಿ ಪಿಂಚಣಿ ಅದಾಲತ್​ ನಡೆಯಲಿದೆ