ನ್ಯೂಸ್

ತುಳುನಾಡು ಪಂಚಾಂಗ ಕ್ಯಾಲೆಂಡರ್ 2025 ಬಿಡುಗಡೆ

Bengaluru - Political - Shivananda Tagadur

ಬೆಂಗಳೂರು:

ಗ್ಲೋಬಲ್ ಮೀಡಿಯಾದ 2025 ರ ತುಳುನಾಡು ಪಂಚಾಂಗ ಕ್ಯಾಲೆಂಡರ್‌ನ್ನು

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯದ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಕೇಂದ್ರವಾಗಿದ್ದು ಅನೇಕ ಇತಿಹಾಸ ಪ್ರಸಿದ್ಧ ಪೌರಾಣಿಕ ಶ್ರದ್ಧಾಕೇಂದ್ರಗಳಾಗಿವೆ.

2025ರ ಕ್ಯಾಲೆಂಡರನ್ನು ಗಣಪತಿ ದೇವಸ್ಥಾನಗಳಾದ ಶ್ರೀ ಶರವು ಮಹಾಗಣಪತಿ ದೇವಸ್ಥಾನ

ಮಂಗಳೂರು, ಸಿದ್ಧಿವಿನಾಯಕ ದೇವಸ್ಥಾನ, ಹಟ್ಟಿಯಂಗಡಿ, ಉಡುಪಿ, ಶ್ರೀ ಮಹಾಲಿಂಗೇಶ್ವರ

ಮಹಾಗಣಪತಿ ದೇವಸ್ಥಾನ ಪಡುಬಿದ್ರಿ ಉಡುಪಿ, ಪಿಲಾರುಖಾನ್ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಉಡುಪಿ, ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ

ಗಣೇಶಪುರ-ಕಾಟಿಪಳ್ಳ, ಮಂಗಳೂರು, ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನ ಧರ್ಮಸ್ಥಳ, ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಉಡುಪಿ, ಮಹಾಗಣಪತಿ ದೇವಸ್ಥಾನ ಸೋಮೇಶ್ವರ ಉಡುಪಿ, ಮಹತೋಭಾರ ಶ್ರೀಸಿದ್ಧಿವಿನಾಯಕ ದೇವಸ್ಥಾನ ಉದ್ಯಾವರ, ಉಡುಪಿ, ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಭಾಶಿ, ಉಡುಪಿ, ಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನ ಉಪ್ಪೂರು, ಮಹಾಗಣಪತಿ ದೇವಸ್ಥಾನ ಆಳದಂಗಡಿ, ದಕ್ಷಿಣ ಕನ್ನಡ ಇವುಗಳ ಮೂಲ

ವಿಗ್ರಹದ ಅಲಂಕಾರವುಳ್ಳ ನೈಜ ಚಿತ್ರಣವನ್ನು ಹೊಂದಿದೆ. ಈ ವಿಶೇಷ ಕ್ಯಾಲೆಂಡರ್‌ಗಳಿಗೆ ರಾಜ್ಯ ಹಾಗೂ ವಿದೇಶಗಳಲ್ಲಿ ಬೇಡಿಕೆ ಇದೆ.

ಬಿಡುಗಡೆಯ ಸಂದರ್ಭದಲ್ಲಿ ಎಸ್‌ಡಿಎಂ ಸೊಸೈಟಿಯ ಸೆಕ್ರೆಟರಿ ಜೀವನಧರ ಕುಮಾರ, ಉದ್ಯಮಿ ಸತೀಶ ಡಿ. ಶೆಟ್ಟಿ ಮತ್ತು ಗ್ಲೋಬಲ್ ಮೀಡಿಯಾದ ಸತೀಶರಾವ್ ಮತ್ತು ದಿನೇಶ ಶೆಟ್ಟಿ ಉಪಸ್ಥಿತರಿದ್ದರು.