ಕೆ.ಎ.ಸೂರ್ಯನಾರಾಯಣ 
ನ್ಯೂಸ್

ವಿಷ್ಣು ದೇವರಿಗೆ ತುಳಸಿ ಪೂಜೆ 10ಕ್ಕೆ

ಸಾಗರ: ಆಷಾಢ ಮಾಸದ ಗುರುಪೂರ್ಣಿಮೆ ಪ್ರಯುಕ್ತ ನಗರೇಶ್ವರ ದೇವಸ್ಥಾನದಲ್ಲಿ ಜು.10ರಂದು ಲೋಕಕಲ್ಯಾಣಾರ್ಥವಾಗಿ ಸಾಗರದ ಆರ್ಯವೈಶ್ಯ ಮಹಾಜನ ಸಮಿತಿಯಿಂದ ಶ್ರೀ ವಿಷ್ಣು ದೇವರಿಗೆ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಾಲೂಕು ಅಧ್ಯಕ್ಷ ಕೆ.ಎ.ಸೂರ್ಯನಾರಾಯಣ ಹೇಳಿದರು.

ನಗರೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ, ಲಕ್ಷ ತುಳಸಿ ಅರ್ಚನೆ ನಡೆಸಲಾಗುತ್ತಿದೆ. ಬೆಳಗ್ಗೆ 10ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಇರುತ್ತದೆ. ದೇವಸ್ಥಾನದಲ್ಲಿ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ವಾರ್ಷಿಕ ರಥೋತ್ಸವದ ಜತೆಗೆ ವಾಸವಿ ಜಯಂತಿ, ಕನ್ನಿಕಾ ಪರಮೇಶ್ವರಿ ಅಗ್ನಿ ಪ್ರವೇಶದ ಹಿನ್ನೆಲೆಯಲ್ಲಿ ಪೂಜಾಕಾರ್ಯಕ್ರಮ ನಡೆಯುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ಕಾರ್ಯದರ್ಶಿ ಆರ್.ಎಸ್.ರಾಜೇಂದ್ರ ಮಾತನಾಡಿ, ನಗರೇಶ್ವರ ದೇವಸ್ಥಾನಕ್ಕೆ 700 ವರ್ಷಗಳ ಇತಿಹಾಸವಿದೆ. ನವರಾತ್ರಿ ಉತ್ಸವ, ರಾಮನವಮಿ, ವಾಸವಿ ಜಯಂತಿ ಮತ್ತಿತರ ಧಾರ್ಮಿಕ ಕಾಯಕ್ರಮಗಳು ವರ್ಷಪೂರ್ತಿ ನಡೆಯುತ್ತವೆ. ಜತೆಗೆ ಪ್ರತಿಭಾ ಪುರಸ್ಕಾರ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ನಮ್ಮ ಸಮಿತಿಯ ಅಂಗ ಸಂಸ್ಥೆಗಳಾದ ವಾಸವಿ ಯುವಕ ಸಂಘ, ಮಹಿಳಾ ಸಂಘ, ಗಂಗಾ ವಿಶ್ವೇಶ್ವರ ದೇವಸ್ಥಾನ ಟ್ರಸ್ಟ್, ವಾಸವಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳು ಉತ್ತಮ ಕೆಲಸ ಮಾಡುತ್ತಿವೆ ಎಂದರು. ಸಂಸ್ಥೆಯ ಮಾಜಿ ಉಪಾಧ್ಯಕ್ಷ ಎಚ್.ಆರ್.ಪ್ರಶಾಂತ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.