ನ್ಯೂಸ್

ಔಷಧ ಜತೆಗೆ ಪೌಷ್ಠಿಕ ಆಹಾರ ಸೇವಿಸಿದರೆ ಕ್ಷಯರೋಗ ದೂರ; ಡಾ. ಇಂದುಧರ

Haveri - Kariyappa Aralikatti

ರಾಣೆಬೆನ್ನೂರ: ಕ್ಷಯರೋಗಿಗಳು ಔಷಧ ತೆಗೆದುಕೊಳ್ಳುವ ಜತೆಗೆ ಪೌಷ್ಠಿಕ ಆಹಾರ ಸೇವಿಸಿದರೆ ಬೇಗನೆ ಗುಣವಾಗಲು ಸಾಧ್ಯವಾಗಲಿದೆ ಎಂದು ಮೇಡ್ಲೇರಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಇಂದುಧರ ಸಿ.ಜೆ. ಹೇಳಿದರು.
ತಾಲೂಕಿನ ಗಂಗಾಜಲ ತಾಂಡಾದಲ್ಲಿ ಅಮೇರಿಕನ ಹೈಬ್ರೀಡ್ ಪ್ರೈ.ಲಿ. ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕ್ಷಯರೋಗಿಗಳಿಗೆ ಉಚಿತ ಆಹಾರ ಪದಾರ್ಥ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2025ಕ್ಕೆ ಭಾರತ ದೇಶವನ್ನು ಕ್ಷಯರೋಗ ಮುಕ್ತವನ್ನಾಗಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆ ರೂಪಿಸಿವೆ. ಆದ್ದರಿಂದ ಪ್ರತಿಯೊಬ್ಬರೂ ಅದಕ್ಕೆ ಸಹಕಾರ ನೀಡಬೇಕು ಎಂದರು.
ಅಮೇರಿಕನ ಹೈಬ್ರೀಡ್ ಪ್ರೈ.ಲಿ.ನ ಸಿಎಂಡಿ ಸಂತೋಷ ಅತ್ತವರ ರೋಗಿಗಳಿಗೆ ಆಹಾರ ಪದಾರ್ಥ ವಿತರಣೆ ಮಾಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ನಾಗರಾಜ ಕುಡಪಲಿ, ಎಂ.ಟಿ. ಹೆಗಡೆ, ನಾಗರಾಜ ಎ.ಕೆ., ಲಕ್ಷ್ಮೀ ಡಂಬ್ರಳ್ಳಿ ಮತ್ತಿತರರು ಉಪಸ್ಥಿತರಿದ್ದರು.