TTD Laddu: ಒಂದು ದಿನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಟಿಟಿಡಿ ಸಿಹಿ ಸುದ್ದಿಯನ್ನು ನೀಡಿದೆ. ಲಡ್ಡು ಪ್ರಸಾದಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದ ಭಕ್ತಾಧಿಗಳಿಗೆ ಸುಲಭ ಹಾಗೂ ಸರಳ ಮಾರ್ಗವನ್ನು ರೂಪಿಸಿರುವ ದೇವಾಲಯದ ಆಡಳಿತ ಮಂಡಳಿ, ಲಡ್ಡು ಸ್ವೀಕರಿಸಲು ಈಗ ಕಿಯೋಸ್ಕ್ ಯಂತ್ರಗಳನ್ನು ಪರಿಚಯಿಸಿದೆ.
ಇದನ್ನೂ ಓದಿ: ಫ್ಲಾಪ್ ಸಾಲಿಗೆ ಕಮಲ್ ಹಾಸನ್ ‘ಥಗ್ ಲೈಫ್’! ಚಿತ್ರದ ಸೋಲು ಕುರಿತು ಕಡೆಗೂ ಮೌನಮುರಿದ ಮಣಿರತ್ನಂ | Thug Life
ಈ ಕಿಯೋಸ್ಕ್ ಯಂತ್ರದಲ್ಲಿ ದರ್ಶನ ಟಿಕೆಟ್ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ, ಅಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್‌ಗೆ ಹಣ ಪಾವತಿಸಿದರೆ, ರಶೀದಿಯೊಂದು ಲಭ್ಯವಾಗುತ್ತದೆ. ಇದನ್ನು ಪ್ರಸಾದ ಹಂಚುವ ಕೌಂಟರ್‌ನಲ್ಲಿ ಕೊಟ್ಟರೆ, ಟಿಟಿಡಿ ಸಿಬ್ಬಂದಿಗಳು ನಿಮಗೆ ಲಡ್ಡು ಪ್ರಸಾದವನ್ನು ಹಸ್ತಾಂತರಿಸುತ್ತಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಕ್ತರಿಗೆ ಹೆಚ್ಚು ಅನುಕೂಲತೆ ಮಾಡಿಕೊಡಲು ಟಿಟಿಡಿ ನವೀನ ವ್ಯವಸ್ಥೆಗಳತ್ತ ಮುಖ ಮಾಡಿರುವುದು ಉತ್ತಮ ಬೆಳವಣಿಗೆ.
ತಿರುಮಲದ ಲಡ್ಡು ಕೌಂಟರ್‌ಗಳಲ್ಲಿ ಕಿಯೋಸ್ಕ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯವಾಗಿ, ಲಡ್ಡು ಪ್ರಸಾದವನ್ನು ಬಯಸಿದರೆ, ಭಕ್ತರು ನೇರವಾಗಿ ಕೌಂಟರ್‌ಗೆ ತೆರಳಿ ಲಡ್ಡುಗಳನ್ನು ಪಡೆಯಲು ತಮ್ಮ ಆಧಾರ್ ಕಾರ್ಡ್ ಅಥವಾ ದರ್ಶನ ಟಿಕೆಟ್‌ಗಳನ್ನು ತೋರಿಸಬೇಕಿದೆ. ಆದಾಗ್ಯೂ, ಟಿಟಿಡಿಯ ಈ ಹೊಸ ವ್ಯವಸ್ಥೆಯು, ಪ್ರಾಯೋಗಿಕ ಹಂತವಾಗಿದೆ. ಲಡ್ಡು ಕೌಂಟರ್‌ಗಳ ಬಳಿ ಸದ್ಯಕ್ಕೆ ಐದು ಕಿಯೋಸ್ಕ್ ಯಂತ್ರಗಳನ್ನು ಇರಿಸಲಾಗಿದೆ. ಈ ಮೂಲಕ ಪ್ರತಿ ಹಂತವನ್ನು ಗಮನಿಸಲಾಗುವುದು.
ಇದನ್ನೂ ಓದಿ: ಇರಾನ್ vs ಇಸ್ರೇಲ್ ಸಂಘರ್ಷ; ಇರಾನ್ಗೆ ರಫ್ತಾಗದೆ ಭಾರತದ ಬಂದರುಗಳಲ್ಲಿ ಸಿಲುಕಿದ 1 ಲಕ್ಷ ಟನ್ ಅಕ್ಕಿ| basmati-exports
ಈ ಯಂತ್ರದಲ್ಲಿ, ಭಕ್ತರು ತಮ್ಮ ದರ್ಶನ ಟಿಕೆಟ್ ಟೋಕನ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಕ್ಯೂಆರ್ ಕೋಡ್ ಪಡೆದು, ಫೋನ್‌ನಲ್ಲಿ ಸ್ಕ್ಯಾನ್ ಮಾಡುವ ಮುಖೇನ ಪಾವತಿಸಬೇಕು. ಅದಾದ ಬಳಿಕ ಒಂದು ಸ್ಲಿಪ್ ಬರುತ್ತದೆ. ಅದನ್ನು ಕೌಂಟರ್‌ನಲ್ಲಿ ತೋರಿಸಿದರೆ ಲಡ್ಡುಗಳನ್ನು ಪಡೆಯುಬಹುದು. ದರ್ಶನದ ಟಿಕೆಟ್ ಇಲ್ಲದ ಭಕ್ತರು ಕೂಡ ಲಡ್ಡು ಪ್ರಸಾದವನ್ನು ಸ್ವೀಕರಿಸಬಹುದಾಗಿದೆ. ಟಿಕೆಟ್ ಇಲ್ಲದವರು ತಮ್ಮ ಆಧಾರ್ ಸಂಖ್ಯೆಯನ್ನು ಕಿಯೋಸ್ಕ್ ಯಂತ್ರದಲ್ಲಿ ನಮೂದಿಸುವ ಮೂಲಕ ಎರಡು ಲಡ್ಡುಗಳನ್ನು ಪಡೆಯಬಹುದು,(ಏಜೆನ್ಸೀಸ್).