Fat loss recipe: ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವಂತಹ ಜನರ ಒತ್ತಡ, ಆಯಾಸ, ದೈಹಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳದೇ ಇರುವುದು ಅನೇಕ ಕಾಯಿಲೆಗಳನ್ನು ಉಂಟು ಮಾಡುತ್ತಿದೆ. ಇದು ಬೊಜ್ಜು, ರಕ್ತದೊತ್ತಡ, ಕಿಡ್ನಿ ವೈಫಲ್ಯ, ಹೃದಯ ರೋಗಗಳನ್ನು ಉಂಟು ಮಾಡುತ್ತದೆ. ಇಂತಹ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರಗಳಲ್ಲಿಯೇ ಪರಿಹಾರ ಕಂಡುಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಆಗಬಹುದು. ಹಾಗಾಗಿ ನೀವೇನಾದರೂ ಬೊಜ್ಜನ್ನು ನಿಯಂತ್ರಿಸಲು ಬಯಸಿದರೆ ಈ ಪನೀರ್ ಮಸಾಲಾವನ್ನು ಸವಿಯಿರಿ.
* ಪನೀರ್
* 2 ಚಮಚ ತುಪ್ಪ
* 1/2 ಚಮಚ ಅರಿಶಿಣ
* ರುಚಿಗೆ ಉಪ್ಪು
* ಸ್ವಲ್ಪ ಗರಂ ಮಸಾಲ
* ಕೊತ್ತುಂಬರಿ ಸೊಪ್ಪು
ಶುದ್ಧವಾದ ಪನೀರ್ನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ತವ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಹಾಕಿ ಕತ್ತರಿಸಿದ ಪನ್ನೀರ್ನ್ನು ಸ್ವಲ್ಪ ಹೊತ್ತು ಫ್ರೈ ಮಾಡಿ ಅದಕ್ಕೆ ಉಪ್ಪು, ಅರಿಶಿಣ, ಗರಂ ಮಸಾಲ ಪುಡಿ ಹಾಕಿ ಎರಡೂ ಬಾಗ ಬೇಯಿಸಿರಿ. ನಂತರ ಅದರ ಮೇಲೆ ಕೊತ್ತುಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಇರುವಾಗಲೇ ಸೇವಿಸಿರಿ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.