ಸಾಗರದಲ್ಲಿ ಆಯೋಜಿಸಿದ್ದ ಅಂಭ್ರಿಣಿ ವಿದ್ಯೇಶ ಸಹಕಾರ ಸಂಘದ ಸಭೆಯನ್ನು ಅಧ್ಯಕ್ಷ ಶಿವಾನಂದ ಯು. ಭಂಡಾರ್‌ಕರ್ ಉದ್ಘಾಟಿಸಿದರು. ಜಿ.ಆರ್.ರಾಘವೇಂದ್ರ, ಟಿ.ವಿ.ಪಾಂಡುರಂಗ, ಉಮಾ, ಕೆ.ಎಸ್.ಸುಧೀಂದ್ರ ಇತರರಿದ್ದರು.  
ನ್ಯೂಸ್

ಸಹಕಾರ ಸಂಘಗಳಿಗೆ ನಂಬಿಕೆಯೇ ಜೀವಾಳ

ಸಾಗರ: ಸಹಕಾರ ಸಂಘಗಳಿಗೆ ನಂಬಿಕೆಯೇ ಜೀವಾಳ. ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದು ಅಂಭ್ರಿಣಿ ವಿದ್ಯೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಯು. ಭಂಡಾರ್‌ಕರ್ ಹೇಳಿದರು.

ಸಾಗರದ ಶಂಕರಮಠದಲ್ಲಿ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಸಭೆ ಹಾಗೂ ಗ್ರಾಹಕ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಸದಸ್ಯರನ್ನು ಆರ್ಥಿವಾಗಿ ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ನಮ್ಮ ಸಂಸ್ಥೆ ನಿರಂತರವಾಗಿ ಷೇರುದಾರರ ಜತೆ ಸಂಪರ್ಕ ಸಾಧಿಸುವ ಜತೆಗೆ ಸಮಾಜಮುಖಿ ಕೆಲಸ ಮಾಡಿಕೊಂಡು ಬರುತ್ತಿದೆ. ಕರೊನಾ ಸಂದರ್ಭ ಕಿಟ್ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾವಂತರಿಗೆ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯ ಆರ್ಥಿಕ ವಹಿವಾಟು, ಸಾಲ ವಸೂಲಾತಿ, ದುಡಿಯುವ ಬಂಡವಾಳ, ಸಾಲ ಸೌಲಭ್ಯ ಎಲ್ಲವೂ ಗ್ರಾಹಕಸ್ನೇಹಿ ಆಗಿದೆ ಎಂದರು.

ಸಂಸ್ಥೆಯ ನಿರ್ದೇಶಕ ಟಿ.ವಿ.ಪಾಂಡುರಂಗ ಮಾತನಾಡಿ, ಸಹಕಾರ ಸಂಸ್ಥೆಯೊಂದು ಷೇರುದಾರರ ಹಿತರಕ್ಷಣೆ ಮಾಡಿದಾಗ ಮಾತ್ರ ಯಶಸ್ವಿಯಾಗಿ ಮುನ್ನಡೆಯುತ್ತದೆ. ಆಡಳಿತ ಮಂಡಳಿ ಕ್ರಿಯಾಶೀಲತೆ, ಸಮಾಜಮುಖಿ ಕೆಲಸ, ನೌಕರರ ಆಸಕ್ತಿ ಎಲ್ಲವೂ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು

ಸಅಸ್ಥೆಯ ಸಿಇಒ ಕೆ.ಎಸ್.ಸುಧೀಂದ್ರ ಮಾತನಾಡಿ, ಸಂಘ ಹೆಚ್ಚು ಕ್ರಿಯಾಶೀಲವಾಗಿ ಬೆಳೆಯಲು ಆಡಳಿತ ಮಂಡಳಿ ಹಾಗೂ ಷೇರುದಾರರ ಸಹಕಾರ ಕಾರಣ. ಈ ವರ್ಷ ಷೇರುದಾರರಿಗೆ ಶೇ. 10 ಡಿವಿಡೆಂಡ್ ನೀಡಲಾಗುತ್ತಿದೆ. ಜತೆಗೆ ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿದರ ನೀಡುತ್ತಿದೆ ಎಂದು ಹೇಳಿದರು.

ಉಪಾಧ್ಯಕ್ಷ ಜಿ.ಆರ್.ರಾಘವೇಂದ್ರ, ಶಿವಪ್ರಕಾಶ್, ಉಮಾ ಭಂಡಾರ್‌ಕರ್, ಜಿ.ಆರ್.ವಿಜಯಲಕ್ಷ್ಮೀ ಕಾರ್ತಿಕ್, ಕರಿಬಸಪ್ಪ ಶಿವಳ್ಳಿ, ರಾಧಾಕೃಷ್ಣ ನಾಯಕ್, ವಿ.ಟಿ.ಸ್ವಾಮಿ ಇತರರಿದ್ದರು.