ಸಾಗರದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂದ ನೂತನ ಕಚೇರಿಯನ್ನು ಪ್ರಾಚಾರ್ಯ ಜಿ.ಪರಮೇಶ್ವರಪ್ಪ ಉದ್ಘಾಟಿಸಿದರು. ಲ$್ಮಣ್​ ನಾಯಕ್​, ಕೆ.ವಿ.ಅರವಿಂದ್​, ಬಿ.ವಿ.ರವೀಂದ್ರನಾಥ್​ ಇತರರಿದ್ದರು. 
ನ್ಯೂಸ್

ನಂಬಿಕೆಯೇ ಸಹಕಾರ ಸಂಗಳಿಗೆ ಜೀವಾಳ

ಸಾಗರ: ಸಹಕಾರ ಸಂಗಳು ಬೆಳೆಯಬೇಕಾದರೆ ಷೇರುದಾರರ ಸಹಕಾರ ಮುಖ್ಯ. ಸರ್ಕಾರಿ ನೌಕರರ ಸೌಹಾರ್ದ ಬೆಳವಣಿಗೆಗೆ ಜಿಲ್ಲೆಯ ಎಲ್ಲ ನೌಕರರು ಸಹಕಾರ ನೀಡಬೇಕು. ನಂಬಿಕೆಯೇ ಸಹಕಾರ ಸಂಗಳಿಗೆ ಜೀವಾಳ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ಪರಮೇಶ್ವರಪ್ಪ ಹೇಳಿದರು.
ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಸಹಕಾರ ತತ್ವದಡಿ ಕೆಲಸ ಮಾಡುವಾಗ ಹೆಚ್ಚು ಜಾಗ್ರತೆಯಿಂದ ಇರಬೇಕು. ಸರ್ಕಾರಿ ನೌಕರರಿಗೆ ಸೀಮಿತವಾದ ರಾಜ್ಯದ ಎರಡನೇ ಸಹಕಾರ ಸೌಹಾರ್ದ ಇದಾಗಿದೆ. ಸಂಸ್ಥೆ ಪ್ರಾರಂಭವಾಗಿ 12 ವರ್ಷ ಆಗಿದ್ದು, ನೌಕರರಿಗೆ ಆರ್ಥಿಕ ಬೆನ್ನೆಲುಬಾಗಿ ಸ್ಪಂದಿಸುತ್ತಿರುವುದು ಗಮನಾರ್ಹ ಸಂಗತಿ. ಷೇರುದಾರಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಾಗ ಹೆಚ್ಚು ಜನರನ್ನು ಆಕರ್ಷಿಸಲು ಸಾಧ್ಯ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕರ ಸಂದ ತಾಲೂಕು ಅಧ್ಯ ಮಾಲತೇಶಪ್ಪ ಮಾತನಾಡಿ, ಸೌಹಾರ್ದ ಎಂದರೆ ಎಲ್ಲರೂ ಸೇರಿ ಮುನ್ನಡೆಯುವುದಾಗಿದೆ. ಸರ್ಕಾರಿ ನೌಕರರ ಸೌಹಾರ್ದ ನೌಕರರ ಆರ್ಥಿಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಸಾಲ ಸೌಲಭ್ಯವನ್ನು 4 ಲ ರೂ. ನೀಡುತ್ತಿದ್ದು, 10 ಲ ರೂ.ಗೆ ಹೆಚ್ಚಿಸಿದರೆ ಅನುಕೂಲವಾಗುತ್ತದೆ ಎಂದರು.
ಸಂಸ್ಥೆ ಅಧ್ಯ ಎಚ್​.ಆರ್​.ನಾಗಭೂಷಣ್​ ಮಾತನಾಡಿ, ಸಂಸ್ಥೆಯು ಸ್ವಂತ ಕಟ್ಟಡ ಹೊಂದುವ ನಿಟ್ಟಿನಲ್ಲಿ ನಿವೇಶನ ಖರೀದಿಗೆ ಚಿಂತನೆ ನಡೆಸಿದೆ. ಠೇವಣಿ ಮೇಲೆ ಶೇ. 9 ಬಡ್ಡಿ ನೀಡುತ್ತಿದೆ. ಖಾಲಿ ನಿವೇಶನ ಖರೀದಿ, ವಾಹನ ಖರೀದಿ ಸೇರಿ ಬೇರೆಬೇರೆ ಉದ್ದೇಶಕ್ಕೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಸ್ಥೆಯು ಶಿವಮೊಗ್ಗ ಜಿಲ್ಲಾ ವ್ಯಾಪ್ತಿ ಹೊಂದಿರುವುದರಿಂದ ಮುಂದಿನ ಆರ್ಥಿಕ ವರ್ಷದೊಳಗೆ ಸದಸ್ಯರ ಸಂಖ್ಯೆ ಹೆಚ್ಚಿಸಲು ಅಗತ್ಯ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಪ್ರೌಢಶಾಲಾ ಸಹ ಶಿಕರ ಸಂದ ತಾಲೂಕು ಅಧ್ಯ ಲ$್ಮಣ್​ ನಾಯಕ್​, ವಲಯ ಅರಣ್ಯಾ-ಧಿಕಾರಿ ಕೆ.ವಿ.ಅರವಿಂದ್​, ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್​ ಇತರರಿದ್ದರು.