ನ್ಯೂಸ್

ಮಹಿಳೆಯರಿಗೆ ನಿದ್ದೆಗೆಡಿಸಿದ ಟ್ರಂಪ್​ ಗೆಲುವು! ಇನ್ಮುಂದೆ ನಾವು ಲೈಂಗಿಕ ಕ್ರಿಯೆಗೆ ಸಹಕರಿಸಲ್ಲ ಎಂದ ಮಹಿಳೆಯರು | 4B Movement

ನವದೆಹಲಿ: ಅಮೇರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷದ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್​ ಗೆಲುವು ಅಲ್ಲಿನ ಲಕ್ಷಾಂತರ ಮಹಿಳೆಯರ ನಿದ್ದೆಗೆಡಿಸಿದೆ. ಟ್ರಂಪ್​ ಗೆಲುವಿಗೆ ಗಂಡಸರೇ ಕಾರಣವಾಗಿದ್ದು, ಅವರ ಜತೆ ಲೈಂಕಿಕ ಕ್ರಿಯೆಯಿಂದ ದೂರ ಇರುವುದಾಗಿ ಪ್ರತಿಜ್ಞೆ ಮಾಡಿ 4B ಚಳುವಳಿಯನ್ನು(4B Movement)  ಆರಂಭಿಸಿದ್ದಾರೆ.

ಕಮಲಾ ಹ್ಯಾರಿಸ್​​ ತಮ್ಮ ಚುನಾವಣಾ ಪ್ರಚಾರದಲ್ಲಿ 'ಟ್ರಂಪ್​ ಒಬ್ಬ ಸ್ತ್ರೀ ವಿರೋಧಿ' ಎಂದು ಹೇಳಿದ್ದರು. ಈ ಹೇಳಿಕೆ ಜತೆಗೆ ಇತರ ವಿಷಯಗಳ ಮೇಲೆ ಟ್ರಂಪ್​ ವಿರುದ್ಧ ಆರೋಪಿಸಿ ಹರಿಹಾಯ್ದಿದ್ದರು. ಹೀಗಾಗಿ, ಲಕ್ಷಾಂತರ ಮಹಿಳೆಯರು ಹ್ಯಾರಿಸ್​ ಪರ ವೋಟ್​ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಇದಕ್ಕೆ ಪೂರಕ ಎಂಬಂತೆ ಹ್ಯಾರಿಸ್​ ಪರ ಮಹಿಳೆಯರು ಮತ್ತು ಟ್ರಂಪ್​ ಪರ ಪುರುಷರು ಅತಿ ಹೆಚ್ಚು ವೋಟ್​ ಮಾಡಿದ್ದಾರೆ ಎಂದು ಕೆಲ ವರದಿಗಳು ಹೇಳಿದೆ. ಚುನಾವಣೆ ಫಲಿತಾಂಶದ ಬಳಿಕ ಅಮೆರಿಕಾದ ಲಕ್ಷಾಂತರ ಮಹಿಳೆಯರು ಟ್ರಂಪ್​ ಗೆಲುವಿನ ಬಗ್ಗೆ ಕಣ್ಣೀರಿಡುತ್ತಾ ವಿಡಿಯೋಗಳನ್ನು ಪೋಸ್ಟ್​ ಮಾಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ಬೆನ್ನಲ್ಲೆ ಟ್ರಂಪ್​ ವಿರುದ್ಧ 4B ಚಳುವಳಿ ಆರಂಭಿಸಿದ್ದಾರೆ.

ಏನೀದು 4B ಚಳುವಳಿ ?

4B ಚಳುವಳಿ ಎಂದರೆ, ಮಹಿಳೆಯರಿಂದ ಪುರುಷರಿಗೆ ಮದುವೆ, ಸಂಬಂಧ, ಲೈಂಗಿಕ ಕ್ರಿಯೆ, ಹೆರಿಗೆ ಸೇರಿದಂತೆ ಇತರ ವಿಷಯಗಳಲ್ಲಿ ಅಸಹಕಾರ ನೀಡುವುದು. 4 ಎಂದರೆ, ನಾಲ್ಕು ವಿಷಯಗಳಲ್ಲಿ ಪುರುಷರಿಗೆ ಸಹಾಯ ಮಾಡದೇ ಇರುವುದು. B ಎಂದರೆ, ಕೊರಿಯಾ ಭಾಷೆಯಲ್ಲಿ 'ಇಲ್ಲ' ಎಂಬ ಅರ್ಥ ನೀಡುತ್ತದೆ. ಈ 4B ಚಳುವಳಿ ಪ್ರಥಮವಾಗಿ, ದಕ್ಷಿಣ ಕೊರಿಯಾದಲ್ಲಿ ಹುಟ್ಟಿಕೊಂಡಿದೆ. 4B ಅಂದೋಲನವು ಕೊರಿಯಾದಲ್ಲಿ ತುಂಬಾನೆ ಪ್ರಭಾವ ಬೀರಿದೆ. ಎಷ್ಟರ ಮಟ್ಟಿಗೆ ಎಂದರೆ ಅ ದೇಶದ ಜನನ ಪ್ರಮಾಣದಲ್ಲಿ ಕುಸಿತ ಕಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನೂ ಇ ಚಳುವಳಿ ಅಮೆರಿಕಕ್ಕೆ ಕಾಲಿಟ್ಟಿದೆ. ಈ ಚಳುವಳಿಗೆ ಪ್ರತಿಭಟನೆಗಳಲ್ಲಿ ಕಡಿಮೆ ಮಹಿಳೆಯರು ಭಾಗವಹಿಸಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಅಧಿಕ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಪ್ರಸ್ತುತ 4B ಅಂದೋಲನವು ಅಮೆರಿಕಾ ಸಂಯುಕ್ತ ರಾಜ್ಯಗಳಲ್ಲಿ ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬಿರಲಿದೆ ಎಂಬವುದನ್ನು ಕಾದು ನೋಡಬೇಕಿದೆ. .(ಏಜೆನ್ಸೀಸ್​)