ನ್ಯೂಸ್

ಯುದ್ಧ ನಿಲ್ಲಿಸಿ ಇಲ್ಲವೇ ಭಾರೀ...! ಪುಟಿನ್​ ನಡೆಗೆ ಸಂಕಷ್ಟ ತಂದಿಟ್ಟ​ ಟ್ರಂಪ್; ರಷ್ಯಾ ವಿರುದ್ಧ ಅಮೆರಿಕ ಬ್ರಹ್ಮಾಸ್ತ್ರ | Trump Warning

Trump Warning: ಯುಕ್ರೇನ್​ ವಿರುದ್ಧ ನಿರಂತರವಾಗಿ ಯುದ್ಧ ದಾಳಿ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟೀನ್​ಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ. ಇದಕ್ಕೂ ಬಗ್ಗುವುದಿಲ್ಲ ಎನ್ನಲು ಸಾಧ್ಯವಾಗದ ರೀತಿಯಲ್ಲಿ ಟ್ರಂಪ್​ ಬೆದರಿಕೆಯೊಡ್ಡಿದ್ದಾರೆ.

ಯುಕ್ರೇನ್‌ ಮೇಲಿನ ಯುದ್ಧವನ್ನು ಮುಂದಿನ 50 ದಿನಗಳಲ್ಲಿ ಪರಿಹರಿಸದಿದ್ದರೆ, ರಷ್ಯಾ ರಾಜಧಾನಿ ಮಾಸ್ಕೋದ ಉಳಿದ ವ್ಯಾಪಾರ ಪಾಲುದಾರರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯುದ್ಧವನ್ನು ಇಲ್ಲಿಗೆ ಕೈಬಿಡದಿದ್ದರೆ ಭಾರೀ ಸುಂಕವನ್ನು ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ರವಾನಿಸಿದ್ದಾರೆ.

"50 ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಬೇಕು. ಇಲ್ಲದೆ ಹೋದರೆ ಬಹಳ ಸಿಂಪಲ್​. ಶೇ.50ರಷ್ಟು ಅಲ್ಲ, 100ರಷ್ಟು ಸುಂಕ ವಿಧಿಸುತ್ತೇವೆ. ಇದನ್ನು ಹೊರಲು ತಯಾರಾಗಿ" ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರ ಈ ನಿರ್ಧಾರ ರಷ್ಯಾಗೆ ಸಂಕಷ್ಟ ತಂದೊಡ್ಡಿದೆ. ಈ ಕುರಿತು ಪುಟಿನ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ? ಯುಕ್ರೇನ್ ಮೇಲಿನ ದಾಳಿ ಕೈಬಿಟ್ಟು, ಒಪ್ಪಂದಕ್ಕೆ ಸಹಿ ಹಾಕ್ತಾರಾ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).