ನ್ಯೂಸ್

ಭಾರತಕ್ಕೆ ಮತ್ತೆ ಶಾಕ್​​ ನೀಡಿದ ಟ್ರಂಪ್​: ಹೆಚ್ಚುವರಿ ಶೇ.25ರಷ್ಟು ಸುಂಕ ವಿಧಿಸಿದ ದೊಡ್ಡಣ್ಣ! | Tariff

Tariff: ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗಿದ್ದು, ಇದೇ ಆ.27ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.

ಈಗಾಗಲೇ ಆ.1ರಿಂದ ಶೇ.25ರಷ್ಟು ಸುಂಕ ವಿಧಿಸಿದ್ದ ಟ್ರಂಪ್​, ಇದೀಗ ಹೆಚ್ಚುವರಿ ಶೇ,25ರಷ್ಟು ಸುಂಕ ವಿಧಿಸುವ ಬಗ್ಗೆ ಧಮ್ಕಿ ಹಾಕಿದ್ದಾರೆ. ಒಂದು ವೇಳೆ ಆ.27ರಂದು ಇದು ಜಾರಿಯಾದರೆ ಒಟ್ಟು ದರ ಶೇ.50ಕ್ಕೆ ಏರಿಕೆಯಾಗಲಿದೆ.

ಭಾರತ ರಷ್ಯಾದಿಂದ ತೈಲ ಖರೀದಿ ನಿರಂತರವಾಗಿ ಮುಂದುವರೆಸುತ್ತಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಭಾರತದ ಆಮದುಗಳ ಮೇಲೆ ಸುಂಕ ಗಣನೀಯವಾಗಿ ಹೆಚ್ಚಳ ಮಾಡುವುದಾಗಿ​ ಟ್ರಂಪ್​ ಮಂಗಳವಾರ ಹೇಳಿಕೆ ನೀಡಿದ್ದರು.