ನ್ಯೂಸ್

ಭಾರತ, ಪಾಕಿಸ್ತಾನ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ ಎಂದ ಟ್ರಂಪ್| Donald Trump

Donald Trump | ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಅತ್ಯಂತ ಘೋರ ಘಟನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವಾಗಲೂ ಉದ್ವಿಗ್ನತೆ ಇದೆ. ಎರಡೂ ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಗೆಹರಿಸಿಕೊಳ್ಳುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಟ್ರಂಪ್​ ಹೇಳಿದ್ದೇನು?

ಪಹಲ್ಗಾಮ್ ಉಗ್ರರ ದಾಳಿ, ಇದು ತುಂಬಾ ಭೀಕರ ದಾಳಿಯಾಗಿದೆ. ನಾನು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಕ್ಕೂ ಆಪ್ತನಾಗಿದ್ದೇನೆ. ಈ ಎರಡೂ ದೇಶಗಳ ನಡುವೆ ದಶಕಗಳಿಂದಲೂ ಉದ್ವಿಗ್ನತೆ ಇದೆ. ಈ ಉದ್ವಿಗ್ನತೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಅವರು ಬಗೆಹರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಟ್ರಂಪ್​ ಹೇಳಿದ್ದಾರೆ.

ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ಎರಡು ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡುತ್ತೀರಾ ಎಂದು ಸುದ್ದಿಗಾರರು ಪ್ರಶ್ನೆ ಕೇಳಿದಾಗ ಉತ್ತರಿಸಿದ ಟ್ರಂಪ್​, ಪಾಕಿಸ್ತಾನ ಮತ್ತು ಭಾರತದ ನಡುವೆ ದೊಡ್ಡ ಉದ್ವಿಗ್ನತೆ ಇದೆ ಎಂದಿದ್ದಾರೆ. ಗಡಿಯಲ್ಲಿ 1,500 ವರ್ಷಗಳಿಂದ ಉದ್ವಿಗ್ನತೆ ಹಾಗೆಯೇ ಇದೆ, ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಬಗೆಹರಿಸುತ್ತಾರೆ ಎಂಬುದು ನನಗೆ ಗೊತ್ತಿದೆ. ನನಗೆ ಎರಡೂ ದೇಶಗಳ ನಾಯಕರು ಬಹಳ ಆತ್ಮೀಯರು.

(ಏಜೆನ್ಸೀಸ್)