Michael Baumgartner: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಂಬಾ ಗೌರವಿಸುತ್ತಾರೆ ಎಂದಿರುವ ಅಮೆರಿಕ ಕಾಂಗ್ರೆಸ್ ಸದಸ್ಯ ಮೈಕೆಲ್ ಬಾಮ್‌ಗಾರ್ಟ್ನರ್, ಉಭಯ ದೇಶಗಳ ನಡುವಿನ ದಾರಿಯಲ್ಲಿ ಕೆಲ ಅಡೆತಡೆಗಳು ಉಂಟಾಗಿದ್ದು ಅವು ಶೀಘ್ರದಲ್ಲೇ ಸರಿಯಾಗಲಿವೆ ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೈಕೆಲ್, ಅಮೆರಿಕಾ ಅಧ್ಯಕ್ಷ ಟ್ರಂಪ್ ಒಬ್ಬ ಡೀಲ್‌ಮೇಕರ್ ಆಗಿದ್ದು ಅವರಿಗೆ ಭಾರತದ ಬಗ್ಗೆ, ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿ ಮೇಲೆ ಅಪಾರ ಗೌರವವಿದೆ ಎಂದು ತಿಳಿಸಿದರು. ಉಭಯ ದೇಶಗಳ ನಡುವೆ ಸೃಷ್ಟಿಯಾಗಿರುವ ಗೊಂದಲಗಳಿಗೆ ಆದಷ್ಟು ಬೇಗ ಪರಿಹಾರ ಸಿಗುತ್ತದೆ ಎಂದರು.
ಭಾರತದ ಮೇಲಿನ ಹೆಚ್ಚಿನ ಸುಂಕಗಳು ಬಗ್ಗೆ ಮಾತನಾಡಿದ ಬಾಮ್‌ಗಾರ್ಟ್ನರ್, ಕೆಲವೊಮ್ಮೆ ಸ್ನೇಹಿತರಿಂದ ಹೆಚ್ಚಿನದನ್ನು ಕೇಳಬೇಕಾಗುತ್ತದೆ, ಅದೇ ರೀತಿ ಅಮೆರಿಕವು ಭಾರತದಿಂದ ಹೆಚ್ಚಿನದನ್ನು ಕೇಳುತ್ತಿದೆ, ಅದು ಭಾರತದ ಮೇಲಿನ ಗೌರವದ ಸಂಕೇತವೆಂದು ನಾನು ಭಾವಿಸುತ್ತೇನೆ ಎಂದರು. ಭಾರತದ ದೃಷ್ಟಿಕೋನದಿಂದ ನೋಡಿದಾಗ ನಿರಾಶೆಗಳು ಉಂಟಾಗಬಹುದು ಸಹಜ, ಆದರೆ ಇದರಿಂದ ನಮ್ಮ ಎರಡು ದೇಶಗಳ ನಡುವಿನ ಮೂಲಭೂತ ಅಂಶಗಳು ತುಂಬಾ ಪ್ರಬಲವಾಗಿವೆ ಎಂದು ಅವರು ಹೇಳಿದರು.
ಇದನ್ನೂ ಓದಿ:ತೂಕ ಕಳೆದುಕೊಂಡ ಕೆಲವೇ ದಿನಗಳಲ್ಲಿ ಮತ್ತೆ ತೂಕ ಮರಳುತ್ತಿದಿಯಾ? ಹಾಗಿದ್ದರೆ ಈ ಸಲಹೆಗಳನ್ನು ಪಾಲಿಸಿ | Health tips
ಶೈಕ್ಷಣಿಕ ಮಟ್ಟದಲ್ಲಿ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ನೋಡಲು ನಾವು ಬಯಸುತ್ತೇವೆ, ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಧ್ಯಯನ ಮಾಡಲು ಬರುತ್ತಿದ್ದಾರೆ. ಇದೀಗ, ಹೊಸ ವೀಸಾ ಪ್ರಕ್ರಿಯೆಯಿಂದಾಗಿ ವೀಸಾಗಳಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಶೀಘ್ರದಲ್ಲೇ ಬಗೆಹರಿಯಲಿದೆ ಎಂದರು.(ಏಜೆನ್ಸೀಸ್)