ನ್ಯೂಸ್

Trump Oath Ceremony | ವಿವಾದ ಹುಟ್ಟುಹಾಕಿದ ಎಲಾನ್​ ಮಸ್ಕ್​ ಹ್ಯಾಂಡ್​ ಗೆಸ್ಚರ್​​​; ‘ನಾಜಿ ಸೆಲ್ಯೂಟ್​’ ಎಂದು ಟೀಕಿಸಿದ್ದೇಕೆ?

ವಾಷಿಂಗ್ಟನ್​ ಡಿಸಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ(ಜನವರಿ 20) ಡೊನಾಲ್ಡ್ ಟ್ರಂಪ್​​ ಅಧಿಕಾರ ವಹಿಸಿಕೊಂಡಿದ್ದಾರೆ(Trump Oath Ceremony). ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿಶ್ವದ ಅನೇಕರು ಅತಿಥಿಗಳಾಗಿ ಭಾಗವಹಿಸಿದ್ದರು. ಏತನ್ಮಧ್ಯೆ ಎಲಾನ್​​ ಮಸ್ಕ್​ ಅವರ ಹ್ಯಾಂಡ್​ ಗೆಸ್ಚರ್​​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ.

ಸಮಾರಂಭದಲ್ಲಿ ವೇದಿಕೆ ಆಗಮಿಸಿದ ಎಲಾನ್​ ಮಸ್ಕ್​​​​​ ಇದು ಸಾಮಾನ್ಯ ವಿಷಯವಲ್ಲ. ಇದು ದೊಡ್ಡ ವಿಷಯವಾಗಿದೆ, ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳುತ್ತಾರೆ. ಜತೆಗೆ ಮಸ್ಕ್ ತನ್ನ ಎದೆಯ ಎಡಭಾಗವನ್ನು ತನ್ನ ಬಲಗೈಯಿಂದ ಟ್ಯಾಪ್ ಮಾಡಿ ನಂತರ ತನ್ನ ಅಂಗೈಯಿಂದ ತನ್ನ ತೋಳನ್ನು ಚಾಚುತ್ತಾರೆ. ಸದ್ಯ ಈ ವಿಡಿಯೋ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಎಲಾನ್​ ಮಸ್ಕ್​ ಅವರ ಹ್ಯಾಂಡ್ ಗೆಸ್ಚರ್​ ಅನ್ನು ಜಾಲತಾಣದಲ್ಲಿ ಸಾಕಷ್ಟು ಟೀಕಿಸಲಾಗುತ್ತಿದೆ. ಇದನ್ನು ‘ನಾಜಿ ಸೆಲ್ಯೂಟ್’ ಎಂದು ಕರೆಯಲಾಗುತ್ತಿದೆ. ಅವರನ್ನು ಹಿಟ್ಲರ್​ ಮತ್ತು ನಾಜಿಗೆ ಹೋಲಿಸಲಾಗುತ್ತಿದೆ. ವಾಸ್ತವವಾಗಿ, ನಾಜಿ ಸೆಲ್ಯೂಟ್ ಅನ್ನು ಹಿಟ್ಲರ್ ಸೆಲ್ಯೂಟ್ ಎಂದೂ ಕರೆಯಲಾಗುತ್ತದೆ. ಈ ಸೂಚಕವನ್ನು ನಾಜಿ ಜರ್ಮನಿಯಲ್ಲಿ ಹಿಟ್ಲರ್ ಸ್ವತಃ ಶುಭಾಶಯವಾಗಿ ಬಳಸಿದರು. ಭುಜದಿಂದ ಬಲಗೈಗೆ ಗಾಳಿಯಲ್ಲಿ ಚಾಚಿದ ನೇರವಾದ ತೋಳಿನೊಂದಿಗೆ ಸೆಲ್ಯೂಟ್ ಅನ್ನು ನಡೆಸಲಾಗುತ್ತದೆ.

ಅಮೆರಿಕನ್ ಇತಿಹಾಸಕಾರರಾದ ರುತ್ ಬೆನ್-ಘಿಯಾಟ್, ಕ್ಲೇರ್ ಆಬಿನ್, ಎಲಾನ್​ ಮಸ್ಕ್​​ ಅವರ ಈ ಗೆಸ್ಚರ್ ಅನ್ನು ನಾಜಿ ಸೆಲ್ಯೂಟ್ ಎಂದು ಕರೆದಿದ್ದಾರೆ. ಆದರೆ ಆಂಟಿ-ಡಿಫಾಮೇಶನ್ ಲೀಗ್ (ADL) ಈ ಗೆಸ್ಚರ್‌ನಲ್ಲಿ ಮಸ್ಕ್ ಅವರನ್ನು ಸಮರ್ಥಿಸಿಕೊಂಡಿದೆ.

ಇನ್ನು ಕೆಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರಿಗೆ ಇಂತಹ ಉತ್ತಮ ತಂತ್ರಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ.

ನಾನು ಈ ಹಿಂದೆ ಹಲವು ಸಂದರ್ಭಗಳಲ್ಲಿ ಎಲಾನ್​ ಮಸ್ಕ್​ ಅವರನ್ನು ಟೀಕಿಸಿದ್ದೇನೆ. ಆದರೆ ಅವರ ಹಾವಭಾವವು ನಾಜಿ ಸೆಲ್ಯೂಟ್ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೆ 'ನಾನು ಇನ್ನು ಮುಂದೆ ನಿಮ್ಮಲ್ಲಿ ಕೆಲವರನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೆಲವರು ಯಾವಾಗಲೂ ನಕಾರಾತ್ಮಕ ವಿಷಯಗಳನ್ನು ನೋಡುತ್ತಾರೆ ಎಂದಿದ್ದಾರೆ. ಇದರೊಂದಿಗೆ ಅಮೆರಿಕದ ಹಲವು ನಾಯಕರು ಎಲಾನ್​ ಮಸ್ಕ್ ಅವರ ರೀತಿಯೆ ಸೆಲ್ಯೂಟ್ ಮಾಡಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದು, ಈ ರೀತಿ ಮಾಡುವುದು ನಾಜಿ ಸೆಲ್ಯೂಟ್ ಆಗಿದ್ದರೆ ಇವರೇನು ಮಾಡುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. (ಏಜೆನ್ಸೀಸ್​​)