ನ್ಯೂಸ್

ಕರೊನಾ ಪಿಡುಗಿನ ನಡುವೆ ಅಮೆರಿಕದಿಂದ ಭಾರತಕ್ಕೆ 1,180.01 ಕೋಟಿ ರೂ. ಶಸ್ತ್ರಾಸ್ತ್ರ ಮಾರಾಟ, ಅಮೆರಿಕದ ಸಂಸತ್​ಗೆ ಮಾಹಿತಿ

ವಾಷಿಂಗ್ಟನ್​: ಕರೊನಾ ಪಿಡುಗು ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಇದಕ್ಕೆ ಅಮೆರಿಕ ಕೂಡ ಹೊರತಲ್ಲ. ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಅದು ಮೊದಲ ಸ್ಥಾನದಲ್ಲಿದೆ. ಆದರೂ, ಭಾರತಕ್ಕೆ 1,180.01 ಕೋಟಿ ರೂ. ಮೌಲ್ಯದ ಕ್ಷಿಪಣಿಗಳು ಮತ್ತು ಟಾರ್ಪೆಡೋಗಳನ್ನು ಮಾರಾಟ ಮಾಡಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಂಸತ್​ಗೆ ಈ ಬಗ್ಗೆ ಮಾಹಿತಿ ಒದಗಿಸಿದ್ದಾರೆ.

700.10 ಕೋಟಿ ರೂ. ಮೊತ್ತದ 10 ಎಜಿಎಂ-84ಎಲ್​ ಹಾರ್ಪೂನ್​ ಬ್ಲಾಕ್​ 2 ಗಾಳಿಯಲ್ಲೇ ಉಡಾವಣೆ ಮಾಡಬಹುದಾದ ಕ್ಷಿಪಣಿಗಳು, 480.01 ಕೋಟಿ ರೂ. ಮೌಲ್ಯದ 16 ಎಂಕೆ 54 ಅಲ್​ ಅಪ್​ ರೌಂಡ್​ ಲೈಟ್​ವೇಟ್​ ಟಾರ್ಪೆಡೋಸ್​ ಮತ್ತು 3 ಎಂಕೆ 54 ಎಕ್ಸರ್​ಸೈಜ್​ ಟಾರ್ಪೆಡೋಸ್​ಗಳು ಭಾರತಕ್ಕೆ ಬರಲಿವೆ.

ಈ ಶಸ್ತ್ರಾಸ್ತ್ರಗಳನ್ನು ಕೂಡಲೇ ಪೂರೈಸುವಂತೆ ಭಾರತೀಯ ಸರ್ಕಾರ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಅಮೆರಿಕದ ಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದ್ದಾಗಿ ಪೆಂಟಾಗನ್​ ತಿಳಿಸಿದೆ.