ನ್ಯೂಸ್

ಶಾಂತಿ ಒಪ್ಪಂದ: ಮಲೇಷ್ಯಾದಲ್ಲಿ ಹೆಜ್ಜೆ ಹಾಕಿದ ಟ್ರಂಪ್​! ವಿಡಿಯೋ ವೈರಲ್​ | Trump Dance

ಮಲೇಷ್ಯಾ: ಇಂದು (ಅ.26) ಏಷ್ಯನ್ ಶೃಂಗಸಭೆಯಲ್ಲಿ ಭಾಗವಹಿಸಲು ಮಲೇಷ್ಯಾಕ್ಕೆ ತೆರಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump Dance), ವಿಮಾನದಿಂದ ಕೆಳಗಿಳಿದು ಅಲ್ಲಿನ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಶೃಂಗಸಭೆಯಲ್ಲಿ ಜಪಾನ್‌ನ ನೂತನ ಪ್ರಧಾನಿ ತಕೈಚಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ದಕ್ಷಿಣ ಕೊರಿಯಾದ ಪ್ರಮುಖ ನಾಯಕರು ಭಾಗವಹಿಸಲಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯ ಭಾಗವಾಗಿ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ಟ್ರಂಪ್​ ಆಗಮಿಸುತ್ತಿದ್ದಂತೆ, ದೇಶದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರಿಗೆ ಭವ್ಯ ಸ್ವಾಗತ ಕೋರಿದರು.

ಈ ವೇಳೆ ಅಲ್ಲಿನ ಸ್ಥಳೀಯರು ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಟ್ರಂಪ್​ಗೆ ವಿಶೇಷವಾಗಿ ಸ್ವಾಗತಿಸಿದರು. ನೃತ್ಯಗಾರರ ಕುಣಿತ ನೋಡುತ್ತಿದ್ದಂತೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕಲು ಶುರುಮಾಡಿದ ಟ್ರಂಪ್​, ಕೆಲ ನಿಮಿಷಗಳ ಕಾಲ ಮಾಡಿದ ಡ್ಯಾನ್ಸ್ ವಿಡಿಯೋ ಸದ್ಯ ಜಾಲತಾಣಗಳಲ್ಲಿ ನೆಟ್ಟಿಗರ ಹುಬ್ಬೇರಿಸಿದೆ. ಟ್ರಂಪ್​ ಕುಣಿತವನ್ನು ಕಂಡ ಮಲೇಷ್ಯಾ ಪ್ರಧಾನಿ ಕೂಡ ಅವರೊಂದಿಗೆ ಸಂಭ್ರಮದಲ್ಲಿ ತೊಡಗಿದರು.

ಟ್ರಂಪ್ ಡ್ಯಾನ್ಸ್ ವಿಡಿಯೋ ವೈರಲ್ ಆಗ್ತಿದ್ದಂತೆ ಕಮೆಂಟ್​ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿರುವ ನೆಟ್ಟಿಗರು, ಈ ಕ್ಷಣವನ್ನು ಮನರಂಜನೆ ಮತ್ತು ಸ್ಮರಣೀಯ ಎಂದಿದ್ದಾರೆ. ಇನ್ನು ಕೆಲವರು, ಟ್ರಂಪ್ ಕುಣಿತ ಸೂಪರ್ ಎಂದು ಹೇಳಿದ್ದಾರೆ. ಅಸಲಿಗೆ ಟ್ರಂಪ್ ಹೆಜ್ಜೆ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚುನಾವಣಾ ಪ್ರಚಾರದ ಸಮಯದಲ್ಲಿಯೂ ಡ್ಯಾನ್ಸ್ ಮಾಡಿದ್ದರು. ಸದಾ ಯಾವುದಾದರೂ ಒಂದು ವಿಚಾರದ ಮೂಲಕ ಸದ್ದು ಮಾಡುವುದು ಮತ್ತು ಸುದ್ದಿಯಾಗುವುದು ಟ್ರಂಪ್​ ಅವರಿಗೇನು ಹೊಸತಲ್ಲ,(ಏಜೆನ್ಸೀಸ್).