ನ್ಯೂಸ್

ಖ್ಯಾತ ನಟಿ ಪ್ರೀತಿಯಲ್ಲಿ ಬಿದ್ದ ಟ್ರಕ್ ಡ್ರೈವರ್; ಕಿಡ್ನಿ ದಾನ ಮಾಡಲು ಸಿದ್ಧನಾದ ಪ್ರೇಮಿ!

ನವದೆಹಲಿ: ನೆಚ್ಚಿನ ನಟಿ, ನಟರಿಗಾಗಿ ಅಭಿಮಾನಿಗಳು ಏನನ್ನು ಮಾಡಲು ಸಿದ್ಧರಾಗಿರುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಮಾತ್ರ ನಾನು ಆ ನಟಿಯನ್ನು ಪ್ರೀತಿಸುತ್ತಿದ್ದೇನೆ. ಆಕೆಗೋಸ್ಕರ ಕಿಡ್ನಿ ದಾನ ಮಾಡಲು ಸಿದ್ಧವಾಗಿದ್ದೇನೆಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ನಟಿ ಸಂಚಿತಾ ಬಸು ಹಾಗೂ ಟ್ರಕ್ ಡ್ರೈವರ್ ಈಗ ಸುದ್ದಿಯಲ್ಲಿದ್ದಾರೆ. ಟ್ರಕ್ ಡ್ರೈವರ್ ಒಬ್ಬರು ಸಂಚಿತಾ ಬಸು ಅವರನ್ನು ಪ್ರೀತಿಸುತ್ತಿದ್ದಾನೆ. ನಾನು ಸಂಚಿತಾರನ್ನು ಪ್ರೀತಿಸುತ್ತೇನೆ. ಅವರಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ಅವನು ಹೇಳಿದ್ದಾನೆ. ಬಾಬಿ ಕುಮಾರ್ ಮಿಶ್ರಾ ಎಂಬ ಫೇಸ್‌ಬುಕ್ ಬಳಕೆದಾರ ಯುವಕನ ವೀಡಿಯೊವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?:

ಡ್ರೈವರ್ ಮನದಾಳದ ಮಾತು: ಪ್ರತಿದಿನ ನಟಿಯ ರೀಲ್ ನೋಡುತ್ತಿದ್ದೇನೆ. ರೀಲ್ಸ್ ನೋಡ್ತಾ ನೋಡ್ತಾ ಸಂಚಿತಾ ಪ್ರೀತಿಗೆ ಬಿದ್ದೆ. ಸಂಚಿತಾಳನ್ನು ನಾನು ನೋಡಿಲ್ಲ. ಆದ್ರೆ ಅವರನ್ನು ಪ್ರೀತಿಸುತ್ತಿದ್ದೇನೆ. ಸಂಚಿತಾ ಪ್ರೀತಿಗಾಗಿ ನಾನು ಏನು ಮಾಡಲೂ ಸಿದ್ಧ. ತನ್ನ ಎರಡೂ ಕಿಡ್ನಿಗಳನ್ನು ದಾನ ಮಾಡಲು ರೆಡಿಯಿದ್ದೇನೆ. ಅವಳಿಲ್ಲದೆ ಬದುಕುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಚಾಲಕ ಹೇಳಿದ್ದಾನೆ. ಚಾಲಕ, ಸಂಚಿತಾ ಅವರ ಅನೇಕ ವಿಡಿಯೋಗಳನ್ನು ತನ್ನ ಫೋನ್‌ನಲ್ಲಿ ಸೇವ್ ಮಾಡಿಕೊಂಡಿದ್ದಾನೆ. ಅದನ್ನು ಆಗಾಗ ನೋಡ್ತಿರುತ್ತಾನೆ.

ಎರಡೂ ಕಿಡ್ನಿಗಳನ್ನು ದಾನ: ಟ್ರಕ್ ಚಾಲಕನ ವಿಶಿಷ್ಟ ಪ್ರೇಮಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರೂ ಚಾಲಕನ ಪ್ರೀತಿ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ನಟಿ ಸಂಚಿತಾ ಬಸು, ಬಿಹಾರದ ಭಾಗಲ್ಪುರ್ ನಿವಾಸಿ. ಸಂಚಿತಾ ಬಸು ರೀಲ್ಸ್ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಂಚಿತಾ, ಸೌತ್ ಚಿತ್ರ ‘ಫಸ್ಟ್ ಡೇ ಫಸ್ಟ್ ಶೋ’ನಲ್ಲಿ ನಾಯಕಿಯಾಗಿ ನಟಿಸಿದ್ದರು. ಸಂಚಿತಾ ಬಸು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾರೆ.