ತ್ರಿಪುರ: ಆಘಾತಕಾರಿ ಘಟನೆಯೊಂದರಲ್ಲಿ ಹಣದ ವಿವಾದದ ಹಿನ್ನೆಲೆಯಲ್ಲಿ ತ್ರಿಪುರಾದ ಖೋವೈ ಜಿಲ್ಲೆಯ ರತನ್‌ಪುರದಲ್ಲಿ 24 ವರ್ಷದ ಯುವಕನೊಬ್ಬ ತನ್ನ 55 ವರ್ಷದ ತಾಯಿಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಆಕೆಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಭೀಕರ ಅಪಘಾತ; ಒಂದೇ ಕುಟುಂಬ ಐವರು ಸಾವು
ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಹರಿಚರಣ್ ಝರಾ ತನ್ನ ತಾಯಿ ಪರ್ಬತಿ ಝರಾ ಅವರ ಬಳಿ ಹಣ ಕೇಳಿದ್ದರು, ಅದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು. ಅದೇ ಜಗಳದಿಂದ ಆತ ತನ್ನ ಹೆತ್ತ ತಾಯಿಯ ತಲೆಯನ್ನು ಕತ್ತರಿಸಿದ್ದಾನೆ ಎಂದಿದ್ದಾರೆ.
“ಮಂಗಳವಾರ ತಡರಾತ್ರಿ ಹರಿಚರಣ್ ಪರ್ಬತಿಯ ತಲೆಯ ಮೇಲೆ ಚೂಪಾದ ಆಯುಧದಿಂದ ಹೊಡೆದು ಕತ್ತರಿಸಿದ್ದಾನೆ ಎಂದು ಹೇಳಲಾಗಿದೆ. ನಾವು ಹರಿಚರಣ್‌ನನ್ನು ಹತ್ಯೆಗೈದ ಆಯುಧದೊಂದಿಗೆ ಬಂಧಿಸಿದ್ದೇವೆ ಹಿರಿಯ ಪೊಲೀಸ್ ಎಂದು ಅಧಿಕಾರಿ ತಿಳಿಸಿದ್ದಾರೆ.
ಆ ಗುಡಿಸಲು ಮನೆಯಲ್ಲಿ ರಕ್ತದ ಮಡುವಿನಲ್ಲಿ ಪಾರ್ಬತಿ ಶವ ಪತ್ತೆಯಾಗಿದೆ. ಫೋರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದು, ಅಪರಾಧ ನಡೆದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದೆ.