Prabhas Spirit: ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಡಾರ್ಲಿಂಗ್ ಪ್ರಭಾಸ್ ಅಭಿನಯಿಸುತ್ತಿರುವ ‘ಸ್ಪಿರಿಟ್’ ಚಿತ್ರದಿಂದ ಇದೀಗ ನಟಿ ದೀಪಿಕಾ ಪಡುಕೋಣೆ ಹೊರನಡೆದಿದ್ದಾರೆ. ಈ ಸುದ್ದಿ ಅಧಿಕೃತವಾಗಿ ಹೊರಬಿದ್ದಿದ್ದೇ ತಡ ದೀಪಿಕಾ ಪಾತ್ರಕ್ಕೆ ಯಾವ ನಟಿ ಆಯ್ಕೆ ಆಗಲಿದ್ದಾರೆ? ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಯಾರಿಗೆ ಈ ಸುವರ್ಣಾವಕಾಶ ಸಿಗಲಿದೆ ಎಂಬ ಪ್ರಶ್ನೆಗಳು ಜಾಲತಾಣವನ್ನು ಸುತ್ತುವರೆದಿತ್ತು. ನೆಟ್ಟಿಗರು ಕೂಡ ಒಂದಷ್ಟು ಹೆಸರುಗಳನ್ನು ಸಲಹೆಯಾಗಿ ನೀಡಿದ್ದರು. ಆದರೆ, ಅಂತಿಮವಾಗಿ ನಿರ್ದೇಶಕರ ಲೆಕ್ಕಾಚಾರಗಳು ಬೇರೆಯೇ ಇತ್ತು ಎಂಬುದು ಇದೀಗ ಶಾಕಿಂಗ್.
ಇದನ್ನೂ ಓದಿ: ಆಪರೇಷನ್ ಸಿಂಧೂರ ಹೆಮ್ಮೆಯ ಸಂಗತಿ! ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ..Mann Ki Baat
ದುಬಾರಿ ಮೊತ್ತದ ಸಂಭಾವನೆ, ದಿನಕ್ಕೆ 6 ಗಂಟೆಗಳ ಚಿತ್ರೀಕರಣ ಸಮಯ ಮತ್ತು ಚಿತ್ರ ತೆರೆಕಂಡ ಬಳಿಕ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ಸಂದೀಪ್ ಕಠಿಣ ನಿರ್ಧಾರ ಕೈಗೊಂಡರು. ದೀಪಿಕಾ ಹೊರಹೋಗುತ್ತಿದ್ದಂತೆ ನಿರ್ದೇಶಕರಿಗೆ ಪ್ರಭಾಸ್ ಎದುರು ಅಭಿನಯಿಸುವ ನಾಯಕಿ ಸ್ಥಾನಕ್ಕೆ ಯಾರನ್ನು ಕರೆತರಬೇಕು ಎಂಬ ಗೊಂದಲ ಶುರುವಾಯಿತು. ಈ ವಿಚಾರ ಸಿನಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಬಾಲಿವುಡ್ ನಟಿ ಶ್ರದ್ಧಾ ಕಪೂರ್, ತೆಲುಗು ನಟಿ ಮೃಣಾಲ್ ಠಾಕೂರ್ ಮತ್ತು ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ಹೆಸರು ಮುನ್ನೆಲೆಗೆ ಬಂದಿತು.
ಈ ಮೂವರಲ್ಲಿ ಯಾರಿಗೆ ಪ್ರಭಾಸ್ ಸ್ಪಿರಿಟ್ನಲ್ಲಿ ಅವಕಾಶ ಸಿಗಬಹುದು ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಕಾಡುತ್ತಿತ್ತು. ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಒಬ್ಬೊಬ್ಬರ ಅಭಿಪ್ರಾಯಗಳು ವಿಭಿನ್ನವಾಗಿತ್ತು. ಬಹುತೇಕರು ಕನ್ನಡದಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಚಿತ್ರದಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದ ಚೆಲುವೆ ರುಕ್ಮಿಣಿ ಅವರಿಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಸಂದೀಪ್ ಲೆಕ್ಕಾಚಾರಗಳು ಮಾತ್ರ ಬೇರೆಯೇ ಆಗಿತ್ತು. ಅದಕ್ಕೆ ಕಾರಣ, ನಟಿ ತ್ರಿಪ್ತಿ ದಿಮ್ರಿ.
ಇದನ್ನೂ ಓದಿ: ರಾಜ್ಯದ ಯುಜನತೆಗೆ ಉದ್ಯೋಗವನ್ನು ಒದಗಿಸುವುದೆ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ:ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ರುಕ್ಮಿಣಿ ವಸಂತ್, ಮೃಣಾಲ್ ಠಾಕೂರ್ ಮತ್ತು ಶ್ರದ್ಧಾ ಕಪೂರ್ರಂತಹ ಬಹುಬೇಡಿಕೆಯ ನಟಿಮಣಿಯರ ಪೈಕಿ ಕಡೆಗೂ ತನ್ನದೇ 'ಅನಿಮಲ್' ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ಬ್ಯೂಟಿ ತ್ರಿಪ್ತಿ ದಿಮ್ರಿಗೆ ಅವಕಾಶ ನೀಡಿರುವ ಸಂದೀಪ್ ರೆಡ್ಡಿ, ಪ್ರಭಾಸ್ ಸ್ಪಿರಿಟ್ನಲ್ಲಿ ಡಾರ್ಲಿಂಗ್ ನಟನ ಜೊತೆ ಕಾಣಿಸಿಕೊಳ್ಳುವಂತೆ ಯುವನಟಿಗೆ ತಿಳಿಸಿದ್ದಾರೆ. ಸದ್ಯ ಇದು ಹಲವರ ಹುಬ್ಬೇರಿಸಿದೆ. ದುಬಾರಿ ಸಂಭಾವನೆ ಬೇಡಿಕೆ ಇಲ್ಲದ ಹಾಗೂ ಚೆನ್ನಾಗಿ ತಿಳಿದಿರುವ ನಟಿಯಾದ ಹಿನ್ನೆಲೆ ಸಂದೀಪ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದರಲ್ಲಿ ಹೆಚ್ಚು ಮಾತಿಲ್ಲ. ಚಿತ್ರ ಹೇಗೆ ಮೂಡಿಬರಲಿದೆ? ಪ್ರಭಾಸ್-ತ್ರಿಪ್ತಿ ಜೋಡಿ ಯಾವ ರೀತಿ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).