ಬೆಂಗಳೂರು: ತ್ರಿಧಾ ಮ್ಯೂಸಿಕ್ ಅಕಾಡೆಮಿಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅ.17ರಂದು ಸಂಜೆ 4.30ಕ್ಕೆ "ತ್ರಿಧಾ ಮಿಲನ- 2025'(Tridha Milan) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್, ಸೃಜನ ಸಾಂಸ್ಕೃತಿಕ ಸಮೂಹದ ಸ್ಥಾಪಕ ಅಧ್ಯಕ್ಷ ನರಹರಿ ದೀಕ್ಷಿತ್ ಉಪಸ್ಥಿತರಿರುವರು.