ನ್ಯೂಸ್

ಮಾಲೀಕನ ಎದುರಲ್ಲೇ ಕಾರಿನಲ್ಲಿದ್ದ 25 ಲಕ್ಷ ರೂ. ದೋಚಿ ಪರಾರಿಯಾದ ಕಳ್ಳ!

ಮೊಹಾಲಿ: ಕಳ್ಳನೊರ್ವ ಕಾರಿನಲ್ಲಿದ್ದ 25 ಲಕ್ಷ ರೂ.ದೋಚಿ ಪರರಾರಿಯಾದ ಘಟನೆ ಪಂಜಾಬ್​ನ ಮೊಹಾಲಿಯಲ್ಲಿ ನಡೆದಿದೆ.

ರಾತ್ರಿ 8.30ರ ಸಮಯದಲ್ಲಿ ಮಹೇಶ್​ ಜೈನ್​ ಎಂಬ ವ್ಯಕ್ತಿ ತನ್ನ ಕಾರಿನಲ್ಲಿ ಮನೆಯ ಕಡೆ ಹೊರಟಿದ್ದರು. ಈ ವೇಳೆ ಟ್ರಾಫಿಕ್​ ಸಿಗ್ನಲ್​ ಇದ್ದಿದ್ದರಿಂದ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಹೊಂಚು ಹಾಕಿದ್ದ ಕಳ್ಳ ನಿಮ್ಮ ಕಾರಿನ ಟ್ಯಾಂಕ್​ ಲೀಕ್​ ಆಗುತ್ತಿದೆ ಎಂದು ಹೇಳಿದ್ದಾನೆ.

ಕೂಡಲೇ ಗಾಬರಿಯಾಗಿ ಇಳಿದು ಟ್ಯಾಂಕ್​ ಪರಿಶೀಲಿಸುತ್ತಿದ್ದಂತೆ ಆತನ ಎದುರೇ ಹಿಂಬದಿ ಸೀಟಿನಲ್ಲಿಟ್ಟಿದ್ದ 25 ಲಕ್ಷ ರೂ. ಇದ್ದ ಬ್ಯಾಗನ್ನು ಹೊತ್ತು ಓಡಿದ್ದಾನೆ. ಕೂಡಲೇ ಹಿಂಬಾಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಅಷ್ಟರಲ್ಲೇ ಕಳ್ಳ ಪರಾರಿಯಾಗಿದ್ದ. ಹಣ ಕಳೆದುಕೊಂಡ ಮಹೇಶ್​ ಈ ಬಗ್ಗೆ ಜರಿಕ್​ಪುರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.