ಹೊಸನಗರ ತಾಲೂಕಿನ ನಗರ ವಿದ್ಯಾಸಂಸ್ಥೆ ನಿವೃತ್ತ ಶಿಕ್ಷಕ ಎಂ.ಎನ್.ಜಗದೀಶ್ ಅವರನ್ನು ನೂಲಿಗ್ಗೇರಿ ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು. ರತ್ನಾ ಜಗದೀಶ್, ಶ್ರೀಯಾ ಜಗದೀಶ್, ಶ್ರೀನಿವಾಸ್, ಉದಯ್‌ಕುಮಾರ್ ಇತರರಿದ್ದರು. 
ನ್ಯೂಸ್

ನಿವೃತ್ತ ಶಿಕ್ಷಕರಿಗೆ ಸನ್ಮಾನ

ಹೊಸನಗರ: ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಬಾಂಧವ್ಯ ಇರುತ್ತದೆ ಎಂದು ನಗರ ವಿದ್ಯಾಸಂಸ್ಥೆ ನಿವೃತ್ತ ಶಿಕ್ಷಕ ಎಂ.ಎನ್.ಜಗದೀಶ್ ಹೇಳಿದರು.

ನೂಲಿಗ್ಗೇರಿ ಗೆಳೆಯರ ಬಳಗ ಮತ್ತು ವಿದ್ಯಾರ್ಥಿಗಳಿಂದ ಮನೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ಸ್ಥಾನ ಜವಾಬ್ದಾರಿಯುತ ಆಗಿದ್ದು, ವಿದ್ಯಾರ್ಥಿಗಳು ಸಮಾಜದ ಪ್ರಗತಿಗೆ ಸೇವೆ ಸಲ್ಲಿಸಿದಾಗ ಶಿಕ್ಷಕನ ಸೇವೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಶ್ರೀನಿವಾಸ ಬಳೆಗಾರ್, ಉದಯಕುಮಾರ್, ವೆಂಕಟೇಶ ಭಟ್, ಹಂಝಾ ನೂಲಿಗ್ಗೇರಿ, ಅಬುಬಕರ್, ಮುಜಾಫರ್, ದಿಲೀಪ್, ರಶ್ಮಿ ಶೆಟ್ಟಿ, ರತ್ನಾ ಜಗದೀಶ್, ಶ್ರೀಯಾ ಜಗದೀಶ್ ಇತರರಿದ್ದರು