ಎಚ್.ಡಿ.ಕೋಟೆ: ಪಟ್ಟಣದ ಹ್ಯಾಂಡ್‌ಪೋಸ್ಟ್‌ನ ಮೈರಾಡ ಕಚೇರಿಯಲ್ಲಿ ಭಾನುವಾರ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಧ್ಯಕ್ಷರಾಗಿ ಬೀಚನಹಳ್ಳಿ ಮಂಜುನಾಥ್, ಉಪಾಧ್ಯಕ್ಷರಾಗಿ ಬಿ.ಕೆ.ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಆರ್.ನಾಗರಾಂ, ಕಾರ್ಯದರ್ಶಿಯಾಗಿ ದೊಡ್ಡಸಿದ್ದು ಹಾದನೂರು, ಖಜಾಂಚಿಯಾಗಿ ಮಂಜುಕೋಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ರವಿಕುಮಾರ್, ಬಿ.ನಾಗೇಶ್, ತುಂಬುಸೋಗೆ ರೇಣುಕಾ, ಜಸ್ಸೀಲಾ, ಬಿ.ರಂಗರಾಜು, ರವಿಕುಮಾರ್, ಸಿ. ಪುಟ್ಟರಾಜು ಪದಗ್ರಹಣ ಮಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ, ಕಾರ್ಯದರ್ಶಿ ಮಹದೇವು ಸೇರಿದಂತೆ ಇತರರು ಇದ್ದರು.