ನ್ಯೂಸ್

ಎರಡು ಸಾವಿರದೊಳಗಿನ ಪಾವತಿಗಳಿಗೂ ಜಿಎಸ್‌ಟಿ?

Webdesk - Narayanaswamy

ನವದೆಹಲಿ: ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ಸಲುವಾಗಿ 2ಸಾವಿರ ರೂ.ರೂ.ಗಿಂತ ಕಡಿಮೆ ವಹಿವಾಟಿಗೆ ಜಿಎಸ್ ಟಿ ವಿಧಿಸುವುದಿಲ್ಲ ಎಂದು ಹೇಳಿದ್ದ ಮೋದಿ ಸರ್ಕಾರ ಇದೀಗ ಎಲ್ಲ ವಹಿವಾಟುಗಳಿಗೂ ಹೊರೆ ಹೇರುವ ನಿರೀಕ್ಷೆಯಿದೆ.

ಇದುವರೆಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ 2ಸಾವಿರ ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ 2ಸಾವಿರ ರೂ,ಗಿಂತ ಕಡಿಮೆ ಪಾವತಿಗೂ ಶೇ.18ರಷ್ಟು ಜಿಎಸ್‌ಟಿ ವಿಧಿಸುವ ಪ್ರಸ್ತಾವನೆಯನ್ನು ಸೋಮವಾರ (ಸೆ.9ರಂದು) ದೆಹಲಿಯಲ್ಲಿ ನಡೆಯುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು 2017 ರಿಂದ ರೂ 2,000 ಕ್ಕಿಂತ ಕಡಿಮೆ ಪಾವತಿಗಳ ಮೇಲೆ ಪಾವತಿ ಸಂಗ್ರಾಹಕರಿಗೆ (ಪಿಎ) ಜಿಎಸ್​ಟಿ ಯಿಂದ ವಿನಾಯಿತಿ ನೀಡಲಾಗುತ್ತಿದೆ. ಇದರಿಂದ ಜನರಿಗೆ ಹೊರೆಯಾಗುವುದಿಲ್ಲ. ಆದರೆ ಈ ಪಾವತಿ ಅಗ್ರಿಗೇಟರ್‌ಗಳು ಬ್ಯಾಂಕಿಂಗ್ ಕಂಪನಿಗಳು, ಹಣಕಾಸು ಸಂಸ್ಥೆಗಳು ಅಥವಾ ಎನ್‌ಬಿಎಫ್‌ಗಳ ಅಡಿಯಲ್ಲಿ ಬರುವುದಿಲ್ಲ ಮತ್ತು ಈ ಅಗ್ರಿಗೇಟರ್‌ಗಳು ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಅವರ ಎಲ್ಲಾ ಸೇವೆಗಳಿಗೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇದು ನಿಯಮ ಸಹ. ಇದನ್ನೇ ಕೌನ್ಸಿಲ್​ ಪ್ರತಿಪಾದಿಸುತ್ತಿದೆ.

2 ಸಾವಿರಕ್ಕಿಂತ ಕಡಿಮೆ ಪಾವತಿಗೆ ಜಿಎಸ್‌ಟಿ ವಿಧಿಸಿದರೆ, ಪಿಎ ಪರವಾನಗಿ ಹೊಂದಿರುವ ಪೈನ್‌ಲ್ಯಾಬ್ಸ್, ರೇಜರ್‌ಪೇ, ಪಾಯು, ಇನ್ಫಿಬೀಮ್ ಮತ್ತು ಇತರ ಕಂಪನಿಗಳ ಮೇಲೆ ಹೊರೆ ಬೀಳುತ್ತದೆ. ಈ ಪಾವತಿ ಸಂಗ್ರಾಹಕರು ಪ್ರತಿ ವಹಿವಾಟಿನ ಮೇಲೆ ಶೇಕಡಾ 0.5 ರಿಂದ 2 ರಷ್ಟು ಪಾವತಿ ಗೇಟ್‌ವೇ ಶುಲ್ಕವನ್ನು ವಿಧಿಸುವ ಸಾಧ್ಯತೆಯಿದೆ. ಹೆಚ್ಚುವರಿ ತೆರಿಗೆಯನ್ನು ಗ್ರಾಹಕರು ಭರಿಸಬೇಕಾಗುತ್ತದೆ.