ನ್ಯೂಸ್

ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

Mysuru Rural

ಹಂಪಾಪುರ: ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿಯ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಶುಕ್ರವಾರ ಎರಡನೇ ಹಂತದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಎಸ್‌ಡಿಎಂಸಿ ಜವಾಬ್ದಾರಿ ಮತ್ತು ಕರ್ತವ್ಯ, ಶಾಲಾಭಿವೃದ್ಧಿ ಯೋಜನೆ ತಯಾರಿಕೆ, ಮೂಲ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅಗತ್ಯವಿರುವ ಸಂಪನ್ಮೂಲಗಳ ಕ್ರೋಡೀಕರಣ ಸೇರಿ ಅಗತ್ಯ ಅಂಶಗಳ ಕುರಿತು ಶಾಲೆ ಮುಖ್ಯಶಿಕ್ಷಕ ನಾಗಾರ್ಜುನ್ ಮಾಹಿತಿ ನೀಡಿದರು.

ಬಲೂನ್ ಆಟ, ಪಾಸಿಂಗ್ ದ ಬಾಲ್ ಮುಂತಾದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಸಿಆರ್‌ಪಿ ಸುರೇಶ್, ಶಿಕ್ಷಕಿ ಎಸ್.ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷ ಪಾಪಣ್ಣ, ಉಪಾಧಕ್ಷೆ ಛಾಯಾಕುಮಾರಿ, ಸದಸ್ಯರಾದ ಗುರುಮೂರ್ತಿ, ಯಶೋದಾ, ಭಾಗ್ಯ, ರತ್ನಮ್ಮ, ಮಹದೇವಮ್ಮ ಇತರರು ಹಾಜರಿದ್ದರು.