ನ್ಯೂಸ್

ಗ್ರಾಹಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ; ಮೇಘಾ

Haveri - Kariyappa Aralikatti

ರಾಣೆಬೆನ್ನೂರ: ಗ್ರಾಹಕರು ತಮ್ಮ ಹಕ್ಕುಗಳ ತಿಳಿದುಕೊಂಡು ಜಾಗೃತರಾಗಿರಬೇಕು. ಒಂದು ವೇಳೆ ಗ್ರಾಹಕರ ಹಕ್ಕು ಉಲ್ಲಂನೆಯಾದಲ್ಲಿ ಕೂಡಲೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ನ್ಯಾಯ ಒದಗಿಸಿಕೊಳ್ಳಬೇಕು ಎಂದು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಸಹಾಯಕ ಪ್ರಾಧ್ಯಾಪಕಿ ಮೇಘಾ ಭೂತೆ ಹೇಳಿದರು.

ಸ್ಥಳಿಯ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಗ್ರಾಹಕರ ಸಂರಕ್ಷಣಾ ಕಾಯ್ದೆ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಸಂಯೋಜಕ ಸುಜಾತಾ ಹುಲ್ಲೂರ, ವೀರಣ್ಣ ಸಿ.ಕೆ., ವಿದ್ಯಾಶ್ರೀ ದಾಮೋದರ, ರೇಖಾ ಶಿಡೇನೂರ, ಸಾಯಿಲತಾ ಮಡಿವಾಳರ, ಅಶ್ವಿನಿ ಮೆಹರವಾಡೆ ಮತ್ತಿತರರು ಉಪಸ್ಥಿತರಿದ್ದರು.