ನ್ಯೂಸ್

ವಿವಿಧ ತರಬೇತಿಗೆ ಅಜಿರ್ ಆಹ್ವಾನ

Haveri - Kariyappa Aralikatti

ಹಾವೇರಿ: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕೆನರಾ ಬ್ಯಾಂಕ್​ ದೇಶಪಾಂಡೆ ಆರ್​ ಸೆಟ್​ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗೆ ಸೆಪ್ಟಂಬರ್​ ಮಾಹೆಯಲ್ಲಿ ಟ್ರಾವೆಲ್​ ಮತ್ತು ಟೂರಿಸ್ಟ್​ ಗೆಡ್​, ನವೆಂಬರ್​ ಮಾಹೆಯಲ್ಲಿ ಮೊಬೈಲ್​ ಪೋನ್​ ರಿಪೇರಿ, ಸವಿರ್ಸ್​, ಜೆಸಿಬಿ ಚಾಲನೆ ಕುರಿತು ಉಚಿತ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿರುತ್ತದೆ. ಅಭ್ಯಥಿರ್ಗಳು 18 ರಿಂದ 45 ವರ್ಷದೊಳಗಿರಬೇಕು. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯಥಿರ್ಗಳು ತಮ್ಮ ಸ್ವ ವಿವರಗಳೊಂದಿಗೆ ಸೆ. 15ರೊಳಗೆ ನಿರ್ದೇಶಕರು, ಕೆನರಾ ಬ್ಯಾಂಕ್​ ದೇಶಪಾಂಡೆ ಆರ್​ಸೆಟ್​ ಸಂಸ್ಥೆ, ಹಳಿಯಾಳ ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಲ್ಲಿಸಬೇಕು ಅಜಿರ್ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.