ನ್ಯೂಸ್

ತರಬೇತಿಗೆ ಬಳಸುತ್ತಿದ್ದ ವಿಮಾನ ಅಪಘಾತ

ಭೋಪಾಲ್ : ಮಧ್ಯಪ್ರದೇಶದ ಭೋಪಾಲ್‌ ಬಳಿಯ ಜಮೀನಿನಲ್ಲಿ ಚಿಕ್ಕದಾದ ಟ್ರೈನರ್ ಏರ್​ಕ್ರಾಫ್ಟ್​ ಒಂದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಮೂವರು ಪೈಲಟ್‌ಗಳಿಗೆ ಸಣ್ಣ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ ಭೋಪಾಲ್​​ನಿಂದ ಗುಣ ಕಡೆಗೆ ಹಾರುತ್ತಿದ್ದ ಚಿಕ್ಕದಾದ ತರಬೇತಿ ವಾಯುವಾಹವವು ಬದವಾಯಿ ಗ್ರಾಮದ ಬಳಿಯ ಜಮೀನಿನಲ್ಲಿ ಕ್ರ್ಯಾಶ್ ಆಯಿತು. ಒಳಗಿದ್ದ ವಿಮಾನ ಚಾಲಕರಿಗೆ ಸಣ್ಣ ಗಾಯಗಳಾದವು. ಅವರನ್ನು ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಲಾಯಿತು ಎಂದು ಭೋಪಾಲ್ ಪೊಲೀಸ್ ಅಧಿಕಾರಿ ಅರುಣ್ ಶರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್)