ಬೆಂಗಳೂರು: ಡಾ.ರಾಜ್ ಕುಮಾರ್ ಅವರ ಸಂಪತ್ತಿಗೆ ಸವಾಲ್ ಚಿತ್ರದ 'ಯಾರೇ ಕೂಗಾಡಲಿ..ಊರೇ ಹೋರಾಡ..' ಹಾಡು ಎಮ್ಮೆ ಕುರಿತು ಹಾಡಿದ್ದರೂ, ಗೂಳಿಗಳು ಸಹ ಕಾದಾಟಕ್ಕಿಳಿದರೆ ಯಾರಿಗೂ ಕೇರ್ ಮಾಡುವುದಿಲ್ಲ. ಇಲ್ಲೊಂದು ಕಡೆ ಕೊಬ್ಬಿದ ಗೂಳಿಗಳು ರೈಲು ಹಳಿಗಳ ಮೇಲೆ ಕಾದಾಟಕ್ಕಿಳಿದಿದ್ದು, ರೈಲು ಬಂದರೂ ಗುದ್ದಾಟ ಮುಂದುವರಿಸಿವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ವೈರಲ್ ವೀಡಿಯೋದಲ್ಲಿರುವಂತೆ ಎರಡು ಗೂಳಿಗಳು ರೈಲು ಗೇಟ್ನಲ್ಲಿ ಕಾದಾಡುತ್ತಿದ್ದವು. ಬಳಿಕ ಅವು ಹಳಿಗಳ ಮೇಲೆ ಹೋದವು. ಅದೇ ಅದೇ ಸಮಯಕ್ಕೆ ರೈಲು ಬಂದಿದೆ. ಕೊನೆಗೆ ಏನಾಯ್ತು ನೋಡಿ..
ಇದು ಎಲ್ಲಿ ನಡೆದಿದೆ ಎಂದು ತಿಳಿದಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದೆ. ರೈಲು ಗೇಟ್ ಬಳಿ ಎರಡು ಗೂಳಿಗಳ ನಡುವೆ ಕಾದಾಟ ಪ್ರಾರಂಭವಾಗುತ್ತದೆ. ಕಾದಾಡುವ ಎರಡೂ ಗೂಳಿಗಳು ತಮ್ಮ ಕೊಂಬುಗಳಿಗೆ ಡಿಕ್ಕಿ ಹೊಡೆದುಕೊಂಡು ಹಿಂದಕ್ಕೆ ಮತ್ತು ಮುಂದಕ್ಕೆ ತಳ್ಳುತ್ತವೆ. ಗೂಳಿ ಕಾಳಗ ನೋಡಿ ಅಲ್ಲಿದ್ದವರೆಲ್ಲ ಎಲ್ಲಿ ತಮ್ಮ ಮೇಲೆ ಬೀಳುತ್ತವೆಯೋ ಎಂಬ ಭಯದಿಂದ ಓಡಿ ಹೋಗಿದ್ದಾರೆ.
ಕಾದಾಡುತ್ತಿದ್ದ ಗೂಳಿಗಳು ಅಂತಿಮವಾಗಿ ರೈಲು ಗೇಟ್ದಾಟಿ ಹಳಿಗಳ ಮೇಲೆ ಹೋದವು. ಅದೇ ಸಮಯಕ್ಕೆ ರೈಲು ಬಂತು. ಆದರೆ ಗೂಳಿಗಳ ಕಾದಾಟವನ್ನು ಕಂಡ ರೈಲು ಚಾಲಕ ತನ್ನ ವೇಗವನ್ನು ಕಡಿಮೆ ಮಾಡಿದ್ದಾನೆ. ಅವನು ನಿಧಾನವಾಗಿ ಬಂದು ಗೂಳಿಗಳ ಬಳಿ ಇದ್ದಕ್ಕಿದ್ದಂತೆ ನಿಲ್ಲಿಸಿದ್ದಾನೆ. ರೈಲು ಎಷ್ಟು ಹೊತ್ತು ಕಾದರೂ ಗೂಳಿಗಳು ಅಲ್ಲಿಂದ ಹರ ನಡೆದಿಲ್ಲ. ಪರಸ್ಪರ ಹೋರಾಡುತ್ತಲೇ ಇರುತ್ತವೆ. ಆಗ ರೈಲು ಸಿಬ್ಬಂದಿ ಅಲ್ಲಿಗೆ ಹೋಗಿ ಅವುಗಳ ಮೇಲೆ ನೀರು ಸುರಿದು ಓಡಿಸುತ್ತಾರೆ. ಆದರೂ ಅಲ್ಲೇ ಇರುತ್ತವೆ.
ಕೊನೆಗೆ ಆತ ದೊಣ್ಣೆ ಹಿಡಿದು ಬೆದರಿಸುತ್ತಾನೆ. ಆಗ ಗೂಳಿಗಳು ಅಲ್ಲಿಂದ ಹೋಗುತ್ತವೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು, "ರೈಲು ನಿಲ್ಲಿಸಿದ ಗೂಳಿಗಳು" ಎಂದು ಹೇಳಿದರೆ, ಇನ್ನು ಕೆಲವರು 'ನಿಮಗೆ ಸಾಟಿ ಯಾರೂ ಇಲ್ಲ' ಎಂದಿದ್ದಾರೆ. ಈ ವೀಡಿಯೊ ಪ್ರಸ್ತುತ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.