ತೈವಾನ್: ದ್ವೀಪ ರಾಷ್ಟ್ರ ತೈವಾನ್ನ ಪೂರ್ವ ಭಾಗದ ಹುವ್ಲಿನ್ ಎಂಬಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 48 ಜನ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಸುಮಾರು 360 ಪ್ರಯಾಣಿಕರನ್ನು ಹೊತ್ತು ಹುವಲಿನ್ ಕಡೆಗೆ ಹೋಗುತ್ತಿದ್ದ ರೈಲು ಸುರಂಗ ಮಾರ್ಗವೊಂದರಲ್ಲಿ ಅಪಘಾತಕ್ಕೆ ಒಳಗಾಗಿದೆ. ಸುರಂಗ ಮಾರ್ಗದಲ್ಲಿ ಮೆಂಟೇನೆನ್ಸ್ ವಾಹನವೊಂದು ನಿಂತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 60 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸರುಂಗ ಮಾರ್ಗದಲ್ಲಿ ಮೆಂಟೆನೆನ್ಸ್ ವಾಹನವನ್ನು ಸರಿಯಾಗಿ ಪಾರ್ಕ್ ಮಾಡಿಲ್ಲವಾಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚಿನ ದಶಕಗಳಲ್ಲಿ ತೈವಾನ್ನಲ್ಲಿ ಸಂಭವಿಸಿದ ಅತಿ ದೊಡ್ಡ ಅಪಘಾತವಾಗಿದೆ. ಅಲ್ಲಿನ ರಾಷ್ಟ್ರಾಧ್ಯಕ್ಷ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.