ನ್ಯೂಸ್

ಕಾರು ಗುದ್ದಿ 10 ಅಡಿ ಮೇಲಕ್ಕೆ ಹಾರಿ ಚಲಿಸುತ್ತಿದ್ದ ಟೆಂಪೋ ಟ್ರಾವೆಲ್​ ಮೇಲೆ ಬಿದ್ದ ಬೈಕ್​​…!

ಕೊಯಮತ್ತೂರು: ಕಾರು ಗುದ್ದಿದ ಪರಿಣಾಮ ಬೈಕ್​​ವೊಂದು 10 ಅಡಿ ಮೇಲಕ್ಕೆ ಹಾರಿ, ಟ್ರಾವೆಲ್​ರ ಮೇಲೆ ಬಿದ್ದು ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬರಲಿವೆ ಕೇವಲ ಎಥೆನಾಲ್ ಬಳಸಿ ಓಡುವ ವಾಹನಗಳು!

ಮೃತನನ್ನು ಪೊಲ್ಲಾಚಿ ಜಿಲ್ಲೆಯ ಅಂಬರಂಪಾಳ್ಯಂನ ಜಾಕೀರ್​ ಹುಸೇನ್​(36) ಎಂದು ಗುರುತಿಸಲಾಗಿದೆ. ಬೈಕ್​ನ ಹಿಂಬದಿಯಲ್ಲಿ ಕುಳಿತಿದ್ದ ಆತನ ಮಗ ಅಜ್ಮಲ್​ ಪರಿಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಬಡ್ಡಿ ಪಂದ್ಯಾವಳಿಗಾಗಿ ಕೊಯಮತ್ತೂರಿನ ನವಕರೈ ಪ್ರದೇಶದಲ್ಲಿನ ತರಬೇತುದಾರರಿಂದ ಮಾರ್ಗದರ್ಶನ ಪಡೆಯಲು ಮಗನನ್ನು ಕರೆದುಕೊಂಡು ಜಾಕೀರ್​ ಹೋಗುತ್ತಿದ್ದರು. ಈ ವೇಳೆ ಚಾವಡಿ ಚೆಕ್ ಪೋಸ್ಟ್ ಬಳಿ ಬಂದಾಗ ಎದುರಿನಿಂದ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಗುದ್ದಿದೆ.
ಪರಿಣಾಮವಾಗಿ ದ್ವಿಚಕ್ರ ವಾಹನ ಮೇಲಕ್ಕೆ ಹಾರಿ ಹಿಂದಿನಿಂದ ಬರುತ್ತಿದ್ದ ಟ್ರಾವೆಲ್​​ರ ಮೇಲೆ ಬಿದ್ದು ಅದರ ಗಾಜು ಪುಡಿಪುಡಿಯಾಗಿದೆ. ಸುಮಾರು 10 ಅಡಿ ಎತ್ತರದಿಂದ ಜಾಕೀರ್ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆತ್ತಲೆ ವಿಡಿಯೋ ಕಾಲ್​ ರೆಕಾರ್ಡ್​ ಮಾಡಿ, ಶಿಕ್ಷಕಿಗೆ 4 ಲಕ್ಷ ರೂ.ಗೆ ಬೇಡಿಕೆಯಿಟ್ಟ ವಿದ್ಯಾರ್ಥಿ

ಸ್ಥಳದಲ್ಲಿದ್ದ ಸ್ಥಳೀಯರು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಬಾಲಕನನ್ನು ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಾಕಿರ್​​ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆ.ಜಿ.ಚಾವಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿ ಬಂದವರಿಗಾಗಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​​​)