ನ್ಯೂಸ್

ಈ ಟ್ರ್ಯಾಕ್ಟರ್​ ಬೆಟ್ಟದ ಮೆಟ್ಟಿಲುಗಳನ್ನು ಏರುತ್ತೆ...! ಅಬ್ಬಾ ಭೌತಶಾಸ್ತ್ರದ ಪಂಡಿತರಿವರು

ನವದೆಹಲಿ: ಕಡಿದಾದ ರಸ್ತೆಗಳಲ್ಲಿ, ಘಟ್ಟ ಪ್ರದೇಶದಲ್ಲಿ ಸಂಚಾರಕ್ಕೆ ವಿಶೇಷ ವಾಹನಗಳ ಅಗತ್ಯವಿದೆ. ಆದರೆ, ಮೆಟ್ಟಿಲುಗಳಿರುವ ಬೆಟ್ಟವನ್ನು ಅದ್ಯಾವ ವಾಹನ ತಾನೇ ಏರಬಲ್ಲುದು...!

ಈ ಪ್ರಶ್ನೆಯನ್ನು ಉತ್ತರಾಖಂಡದ ಕೇದಾರನಾಥ್​ ನಿವಾಸಿಗಳಿಗೆ ಕೇಳಿದರೆ ಖಂಡಿತ ನಗುತ್ತಾರೆ. ಏಕೆಂದರೆ, ಟ್ತ್ಯಾಕ್ಟರ್​ಗಳನ್ನು ಈ ಉದ್ದೇಶಕ್ಕೆ ಬಳಸುತ್ತಾರೆ. ಮಾತ್ರವಲ್ಲ, ಭಾರಿ ಗಾತ್ರದ ವಸ್ತುಗಳನ್ನು ಅದರಲ್ಲಿ ಸಾಗಿಸುತ್ತಾರೆ.

ಆದರೆ, ಇದು ಎಲ್ಲರಿಗೂ ಸಾಧ್ಯವಾಗುವ ಸಂಗತಿಯಲ್ಲ ಎಂಬುದು ಇಲ್ಲಿನ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಇವರನ್ನು ಭೌತಶಾಸ್ತ್ರದ ಪಂಡಿತರೇ ಎನ್ನಬೇಕು.

ಮಂದಿರಕ್ಕೆ ಜನರೇಟರ್​ ಸಾಗಿಸುವ ದೃಶ್ಯವಿದು. ಟ್ರ್ಯಾಕ್ಟರ್​ನ ಹಿಂಭಾಗದಲ್ಲಿ ಜನರೇಟರ್​ ಹೇರಲಾಗಿದ್ದು, ಅದರ ಭಾರಕ್ಕೆ ಸಮನಾಗುವಂತೆ ಮುಂಬದಿ ನಾಲ್ಕು ಜನರು ಕುತಿದ್ದಾರೆ. ಡ್ರೈವರ್​ನ ಜಾಣ್ಮೆ ಮೆಚ್ಚತಕ್ಕದ್ದೇ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುತ್ವಾಕರ್ಷಣೆ, ಗುರುತ್ವಾಕರ್ಷಣೆ ಕೇಂದ್ರ, ಭಾರದ ಹಂಚಿಕೆ, ಚಲನೆ, ಸಮತೋಲನ ಎಲ್ಲವನ್ನೂ ಅರಿತು ಇಂಥದ್ದೊಂದು ಸಾಹಸ ಕೈಗೊಳ್ಳಲಾಗಿದೆ ಎಂದು ಮತ್ತೊಬ್ಬರು ಬಣ್ಣಿಸಿದ್ದಾರೆ. ಆದರೂ ಇದು ಅಪಾಯಕಾರಿ ಸಾಹಸ ಎಂದು ಮತ್ತೆ ಕೆಲವರು ಎಚ್ಚರ ಎಂದಿದ್ದಾರೆ.