ಡೆಹ್ರಾಡೂನ್: ಕ್ಷುಲ್ಲಕ ಕಾರಣಕ್ಕೆ ಪ್ರವಾಸಿಗ ಹಾಗೂ ದೋಣಿ ನಡೆಸುವವರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿರುವ ಘಟನೆ ಉತ್ತರಾಖಂಡದ ನೈನಿತಾಲ್ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತರಪ್ರದೇಶ ಮೂಲದ ಪ್ರವಾಸಿಗ ಆಸಿಫ್ ಎಂಬುವವರು ಹಂಭೀರವಾಗಿ ಗಾಯಗೊಂಡಿದ್ಧಾರೆ ಎಂದು ವರದಿಯಾಗಿದೆ.
ಉತ್ತರಪ್ರದೇಶ ಮೂಲದ ಆಸಿಫ್ ಹಾಗೂ ಕುಟುಂಬಸ್ಥರು ಪ್ರವಾಸಕ್ಕೆಂದು ಉತ್ತರಾಖಂಡದ ನೈನಿತಾಲ್ಗೆ ಬಂದಿದ್ದರು. ಈ ವೇಳೆ ಮಲ್ಲಿತಾಲ್ ಸರೋವರವನ್ನು ವೀಕ್ಷಿಸಲು ಎರಡು ದೋಣಿಗಳನ್ನು ಬಾಡಿಗೆಗೆ ಪಡೆದಿದ್ದಾರೆ. ದೋಣಿಯಲ್ಲಿ ತೆರಳುವಾಗ ಮುಂಬದಿ ಇದ್ದ ದೋಣಿಯನ್ನು ಹಿಂಬದಿ ಬರುತ್ತಿದ್ದ ಮತ್ತೊಂದು ದೋಣಿ ಹಿಂದಿಕ್ಕಿದೆ.
ಇದನ್ನೂ ಓದಿ: ನಟಿ ಖುಷ್ಬೂ ಸುಂದರ್ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು
ಇದರಿಂದ ಕೋಪಗೊಂಡ ಆಸಿಫ್ ದೋಣಿ ನಡೆಸುವವರಿಗೆ ತಮ್ಮನ್ನು ಹಿಂಬಾಲಿಸುವಂತೆ ಹೇಳಿದ್ದಾರೆ. ಇದಾದ ಕೆಲ ಕ್ಷಣಗಳ ಬಳಿಕ ತಮ್ಮ ದೋಣಿಯನ್ನು ಹಿಂದಿಕ್ಕಿದ್ದಕ್ಕಾಗಿ ತೀವ್ರವಾಗಿ ಸಿಟ್ಟುಗೊಂಡ ಆಸಿಫ್ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ಧಾರೆ. ಇದರಿಂದ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪ್ರವಾಸಿಗನ ಮೇಲೆ ದೋಣಿ ನಡೆಸುವವರು ಹಲ್ಲೆ ನಡೆಸಿದ್ಧಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಡದಲ್ಲಿದ್ದ ಸ್ಥಳೀಯರು ಪರಿಸ್ಥಿತಿಯನ್ನು ತಿಳಿಸಿಗೊಳಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ ಎಂದು ವರದಿಯಾಗಿದೆ.