ನೀವು ಡುರಿಯನ್ ಹಣ್ಣುಗಳ (Durian Fruit) ಬಗ್ಗೆ ಕೇಳಿರಬಹುದು. ಇಂಡೋನೇಷ್ಯಾ, ಮಲೇಷ್ಯಾ, ಸಿಂಗಪೂರ, ಥೈಲ್ಯಾಂಡ್, ಫಿಲಿಫೈನ್ಸ್ ಮುಂತಾದ ಕಡೆಗಳಲ್ಲಿ ಕಾಣಸಿಗುವ ಈ ಹಣ್ಣು ಅತಿ ಹೆಚ್ಚು ಪ್ರೋಟೀನ್ (Proteins) ಯುಕ್ತವಾಗಿದೆ.
ಇದನ್ನೂ ಓದಿ:ಸಿಕ್ಕಿಂನಲ್ಲಿ ಭಾರೀ ಮಳೆ; ಭೂಕುಸಿತದ ನಡುವೆ ಸಿಲುಕಿದ 1500 ಪ್ರವಾಸಿಗರು: 8 ಜನ ನಾಪತ್ತೆ! | Heavy Rains
ಚಿಕ್ಕ ಹಲಸಿನ ಹಣ್ಣಿನಂತೆ ಕಾಣುವ ಈ ಡುರಿಯನ್ ಹಣ್ಣು ಅದರಂತೆಯೇ ಮುಳ್ಳುಗಳಿರುವ ಹಸಿರು ಬಣ್ಣದ ಹೊರಪದರ ಹೊಂದಿದೆ. ಕೆಲವು ರಾಷ್ಟ್ರಗಳಲ್ಲಿ ಇದನ್ನು ಹಣ್ಣುಗಳ ರಾಜ ಅಂತಲೂ ಕರೆಯುತ್ತಾರೆ. ಆದ್ರೆ ಈ ಹಣ್ಣು ಪ್ರಖ್ಯಾತಿ ಹಾಗೂ ಕುಖ್ಯಾತಿ ಪಡೆದಿರೋದು ಅದರ ವಾಸನೆಯಿಂದ. ಈ ಹಣ್ಣಿನ ಗಾಢವಾದ ವಾಸನೆ ಅತ್ಯಂತ ಕೆಟ್ಟದಾಗಿರುತ್ತದೆ ಎನ್ನಲಾಗಿದ್ದು ಹಲವು ದೇಶಗಳ ರೆಸ್ಟೋರೆಂಟ್ (Restaurant), ಸಾರ್ವಜನಿಕ ಸಾರಿಗೆ ಮುಂತಾದೆಡೆ ಈ ಹಣ್ಣನ್ನು ನಿಷೇಧಿಸಲಾಗಿದೆ. ಇದೀಗ ಸಿಂಗಾಪುರಕ್ಕೆ ಭೇಟಿ ನೀಡಿದ್ದ ಚೀನಿ ಪ್ರವಾಸಿಗೊಬ್ಬರು ತನ್ನ ಹೊಟೇಲ್ ರೂಮ್ಗೆ ಈ ಡುರಿಯನ್ ಹಣ್ಣು ಕೊಂಡೊಯ್ಯುದ್ದರಿಂದ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.
ಈ ಕುರಿತು ಚೀನಿ ಸಾಮಾಜಿಕ ಜಾಲತಾಣದಲ್ಲಿ ಕ್ಸಿಯಾಹೊಂಗ್ಶು (XHS) ಹೆಸರಿನ ಮಹಿಳೆ ಹೊಟೇಲ್ನಲ್ಲಿ ತನಗೆ ದಂಡ ವಿಧಿಸಿದ ಅನುಭವವನ್ನು ಹಂಚಿಕೊಂಡಿದ್ದಾಳೆ.
ಇದನ್ನೂ ಓದಿ:ಐಪಿಎಲ್ ಫೈನಲ್ 2025: ಜ್ಯೋತಿಷ್ಯದ ಪ್ರಕಾರ ಈ ಬಾರಿ ಆರ್ಸಿಬಿ ಟ್ರೋಫಿ ಗೆಲ್ಲುತ್ತಾ? ಇಲ್ಲಿದೆ ಅಚ್ಚರಿ ಸಂಗತಿ! RCB
ಸ್ನೇಹಿತೆಯೊಂದಿಗೆ ನಗರವನ್ನು(ಸಿಂಗಾಪುರ) ಆನ್ವೇಷಿಸುತ್ತಿದ್ದಾಗೆ ರಸ್ತೆ ಬದಿಯಲ್ಲಿ ಈ ಡುರಿಯನ್ ಹಣ್ಣು ಮಾರಾಟ ಮಾಡುವುದನ್ನು ಕಂಡಿದ್ದಾಳೆ. ಕೂಡಲೇ ಹಣ್ಣನ್ನು ತಗೆದುಕೊಂಡು ತನ್ನ ಹೊಟೇಲ್ ರೂಮ್ಗೆ ಬಂದಿದ್ದಾಳೆ. ರೂಮ್ನಲ್ಲಿದ್ದ ತನ್ನ ಗಂಡನ ಜತೆ ಇದನ್ನು ಕಟ್ ಮಾಡಿ ತಿನ್ನುಲು ಆರಂಭಿಸಿದ್ದಾಳೆ. ಈ ವೇಳೆ ಹಣ್ಣಿನ ವಾಸನೆ ಹೊಟೇಲ್ನಾದ್ಯಂತ ಹರಡಿದೆ. ಸಂಜೆ ವೇಳೆ ರೂಮ್ ಬಿಟ್ಟು ಹೊರ ಬರಬೇಕಾದಾಗ ಆಕೆಯ ಕೈಗೆ ಬಿಲ್ ನೀಡಿದ್ದಾರೆ. ಬಿಲ್ ನೋಡಿ ಶಾಕ್ ಆದ ಕ್ಸಿಯಾಹೊಂಗ್ಶು ಹೊಟೇಲ್ ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ.
''ನನ್ನ ಕಣ್ಣುಗಳನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ'' ರೂಮ್ ಬಾಡಿಗೆಯ ಎರಡರಿಂದ ಮೂರು ಪಟ್ಟು ದಂಡ ವಿಧಿಸಿದ್ದಾರೆ. $200 ಅಂದರೆ ಭಾರತೀಯ ರೂಗಳಲ್ಲಿ 13,000 ದಂಡ ವಿಧಿಸಿದ್ದಾರೆ. ಆ ಹಣ್ಣಿನ ವಾಸನೆಯಿಂದ ಹೊಟೇಲ್ಗೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ಎಂದು ನನಗೆ ತಿಳಿ ಹೇಳಿದರು. ಹೀಗಾಗಿ, ನಾನು ಅನಿವಾರ್ಯ ಹಾಗೂ ಬೇರೆ ದಾರಿಯಿಲ್ಲದೆ ದಂಡ ಕಟ್ಟಿ ಬಂದೆ. ಸಿಂಗಾಪುರಕ್ಕೆ ಭೇಟಿ ನೀಡಿದರೆ ಹೊಟೇಲ್ ನಿಯಮಗಳನ್ನು ಒಮ್ಮೆ ಓದಿಕೊಳ್ಳಿ ಅಥವಾ ಕೇಳಿ ತಿಳಿದುಕೊಳ್ಳಿ ಎಂದಿದ್ದಾರೆ.(ಏಜೆನ್ಸೀಸ್)