ಕೊಲಂಬೊ: ಶ್ರೀಲಂಕಾ ಪ್ರವಾಸೋದ್ಯಮವು ಬುಧವಾರ ಹೊಸ ಮೈಲಿಗಲ್ಲನ್ನು ತಲುಪಿದ್ದು, 900,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ವರ್ಷ ಆಗಸ್ಟ್ 30 ರಂದು ಶ್ರೀಲಂಕಾಕ್ಕೆ ಪ್ರವಾಸಿಗರ ಆಗಮನದ ಸಂಖ್ಯೆ 900,000 ಗಡಿ ದಾಟಿದೆ.
ಆಗಸ್ಟ್ 30 ರ ಹೊತ್ತಿಗೆ, ಶ್ರೀಲಂಕಾವು ಒಟ್ಟು 900, 708 ಪ್ರವಾಸಿಗರನ್ನು ಸ್ವಾಗತಿಸಿದೆ ಎಂದು ಶ್ರೀಲಂಕಾ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ (SLTDA) ತಾತ್ಕಾಲಿಕ ಮಾಹಿತಿಯು ತೋರಿಸಿದೆ. ಶ್ರೀಲಂಕಾದ ಪ್ರವಾಸೋದ್ಯಮವು 2023 ರಲ್ಲಿ ಎರಡು ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂದಹಾಗೆ ಶ್ರೀಲಂಕಾದ ಪ್ರವಾಸೋದ್ಯಮ ಕೋವಿಡ್ 19 ಸಮಯದಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳಿಂದ ಹಿನ್ನಡೆ ಅನುಭವಿಸಿತ್ತು. ಸದ್ಯ 1.5 ಮಿಲಿಯನ್ ಪ್ರವಾಸಿಗರೊಂದಿಗೆ ವರ್ಷವನ್ನು ಕೊನೆಗೊಳಿಸಲು ಶ್ರೀಲಂಕಾ ಆಶಿಸಿದೆ.
ಇನ್ನು ಪ್ರವಾಸೋದ್ಯಮದಲ್ಲಿ ಭಾರತವು ಅಗ್ರ ಸ್ಥಾನವನ್ನು ಹೊಂದಿದ್ದರೆ, ರಷ್ಯಾದ ಒಕ್ಕೂಟವು ಎರಡನೇ ಸ್ಥಾನದಲ್ಲಿದೆ. ಆದರೆ ಯುಕೆ ಮೂರನೇ ಸ್ಥಾನದಲ್ಲಿದೆ.
2023 ರ ಏಷ್ಯಾ ಕಪ್‌ಗೆ ಮುಂಚಿತವಾಗಿ ಹೋಮ್ ಸ್ಟೇಗಳನ್ನು ತಾತ್ಕಾಲಿಕವಾಗಿ ನೋಂದಾಯಿಸಲು SLTDA ಯ ಉಪಕ್ರಮವು ಕ್ಯಾಂಡಿ ಜಿಲ್ಲೆಯಲ್ಲಿ ಹೆಚ್ಚಿನ ವಸತಿ ಬೇಡಿಕೆಯನ್ನು ಪೂರೈಸಲು 550 ಪ್ರತಿಕ್ರಿಯೆಗಳನ್ನು ಪಟ್ಟಿಮಾಡಿದೆ ಎಂದು ವರದಿಯಾಗಿದೆ.