ಆರಾಮವಾಗಿ ಮಲಗಿದ ಮಗುವಿನ ಭಂಗಿ ನೋಡಿ ಮನಸೋತ ನೆಟ್ಟಿಗರು  
ನ್ಯೂಸ್

ಹುಟ್ಟಿದ ತಕ್ಷಣವೇ ಫುಲ್ ಕೂಲ್! ಈಜಿಪ್ಟ್ ಮಗುವಿನ ಸ್ಟೈಲ್‌ಗೆ ಫಿದಾ ಆದ ನೆಟ್ಟಿಗರು | Relaxed Newborn Baby

ಈಜಿಪ್ಟ್‌ನಲ್ಲಿ ಹುಟ್ಟಿದ ಪುಟಾಣಿಯೊಂದು ಆರಾಮವಾಗಿ ಮಲಗಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮಗುವಿನ ಫುಲ್ ಕೂಲ್ ಸ್ಟೈಲ್ ನೋಡಿ ನೆಟ್ಟಿಗರು ಫನ್ನಿ ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

Egyptian newborn: ಮಗು ಹುಟ್ಟಿದ ತಕ್ಷಣ ಅಳುತ್ತೆ, ಕೈಕಾಲು ಆಡಿಸುತ್ತೆ ಅಂತ ನಾವು ಅಂದುಕೊಂಡಿರ್ತೀವಿ. ಆದ್ರೆ ಈಜಿಪ್ಟ್‌ನಲ್ಲಿ ಹುಟ್ಟಿರೋ ಈ ಪುಟಾಣಿ ಮಾತ್ರ ಫುಲ್ ಕೂಲ್ ಆಗಿ ಮಲಗಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನ ನೋಡಿದ ನೆಟ್ಟಿಗರು, ’ಮಗು ಈಗಾಗಲೇ ಜೀವನದ ಗುಟ್ಟು ಕಂಡುಕೊಂಡಿದೆ’ ಅಂತ ತಮಾಷೆ ಮಾಡುತ್ತಿದ್ದಾರೆ.

ಕೈರೋ ನಗರದ ಮಕ್ಕಳ ತಜ್ಞ ಹಾಗೂ ನವಜಾತ ಶಿಶುಗಳ ವೈದ್ಯರಾದ ಡಾ. ಇಸ್ಲಾಂ ಎಲ್ದೆಹ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೆರಿಗೆ ನಂತರದ ವೈದ್ಯಕೀಯ ಪ್ರಕ್ರಿಯೆಯ ಬಳಿಕ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ಮಗು ಆರಾಮವಾಗಿ ಮಲಗಿರೋದು ಕಾಣಿಸುತ್ತೆ. ಅದರ ನಿರಾಳ ಭಂಗಿ ಮತ್ತು ಮುಖದ ಮೇಲಿನ ಶಾಂತ ಭಾವ ನೋಡಿದ್ರೆ, ಜಗತ್ತಿಗೆ ಈಗಷ್ಟೇ ಬಂದಿದ್ರೂ ಯಾವುದಕ್ಕೂ ಟೆನ್ಷನ್ ತಗೋತಿಲ್ಲ ಅನ್ನೋ ತರ ಕಾಣಿಸುತ್ತೆ.

ಮಗುವಿನ ಕೂಲ್ ಸ್ಟೈಲ್‌ಗೆ ನೆಟ್ಟಿಗರು ಫಿದಾ

ಸಾಮಾನ್ಯವಾಗಿ ನವಜಾತ ಶಿಶುಗಳು ಅಳೋದು, ಕೈಕಾಲು ಆಡಿಸೋದು ಕಾಣಿಸುತ್ತೆ. ಆದ್ರೆ ಈ ಪುಟಾಣಿ ಮಾತ್ರ ಆರಾಮಾಗಿ ಮಲಗಿರೋ ರೀತಿ ಎಲ್ಲರ ಗಮನ ಸೆಳೆದಿದೆ. ವಿಡಿಯೋ ನೋಡಿದವರು ಮಗುವಿನ ಭಂಗಿಗೆ ತಮ್ಮದೇ ಆದ ಅರ್ಥ ಕಲ್ಪಿಸಿಕೊಂಡು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

‘ಹುಟ್ಟಿದ ದಿನದಿಂದಲೇ ಜೀವನದಲ್ಲಿ ಏನು ಮುಖ್ಯ ಅಂತ ಗೊತ್ತಾಗಿದೆ’, ‘ಯಾವುದಕ್ಕೂ ಅವಸರ ಬೇಡ ಅನ್ನೋ ತತ್ವ ಈಗಾಗಲೇ ಕಲಿತಿದೆ’ ಅನ್ನೋ ರೀತಿಯಲ್ಲಿ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ ದುರ್ಗಾ ಪೂಜೆ ದುರಂತ: 19 ಬಲಿ, ಗಾಯಾಳುಗಳ ಭೇಟಿಗೆ ಬಂದ ಅಮಿತ್ ಶಾ | Amit Shah Kolkata Visit

ಆದ್ರೆ, ಮಗುವಿನ ಮುಖಭಾವ ಅಥವಾ ಮಲಗಿದ ಭಂಗಿ ನೋಡಿ ಅದರ ಮನಸ್ಸಿನಲ್ಲಿ ಏನಿದೆ ಅಂತ ಹೇಳೋಕೆ ಆಗಲ್ಲ. ನವಜಾತ ಶಿಶುಗಳು ವಿಶ್ರಾಂತಿ ಪಡೆಯುವಾಗ ಸಹಜವಾಗಿಯೇ ಬೇರೆ ಬೇರೆ ಭಂಗಿ ಮತ್ತು ಮುಖಭಾವಗಳನ್ನು ತೋರಿಸುತ್ತವೆ. ಆದರೂ ಈ ಪುಟಾಣಿಯ ನಿರಾಳ ನೋಟ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹಲವರ ಮುಖದಲ್ಲಿ ನಗು ಮೂಡಿಸಿದೆ.