Recipe : ಇಂದಿನ ದಿನಗಳಲ್ಲಿ ನಾನಾ ರೀತಿಯ ಐಸ್ಕ್ರೀಂಗಳಿಗೆ ಜನರು ಮಾರು ಹೋಗಿದ್ದಾರೆ. ಹಾಗೆಯೇ ಅನೇಕ ರೀತಿಯ ಫ್ಲೇವರ್ಗಳಿಂದ ಐಸ್‌ಕ್ರೀಂ ಪಾರ್ಲರ್ಗಳು ಜನರನ್ನು ಆಕರ್ಷಿಸುತ್ತವೆ. ಅಂದಹಾಗೇ ಕೆಲವರು ಹೊರಗಿನ ಆಹಾರವನ್ನು ಸೇವಿಸಲು ಇಷ್ಟಪಡದವರು ಕೆಲವೇ ಪದಾರ್ಥಗಳಲ್ಲಿ ಇಂದೇ ಮನೆಯಲ್ಲಿ ತಯಾರಿಸಿ ರುಚಿಕರವಾದ ಟೂಟಿ ಫ್ರೂಟಿ ಐಸ್‌ಕ್ರೀಂ.ಈ ರೆಸಿಪಿಯು ರುಚಿಕರವಾಗಿರುತ್ತದೆ ಮತ್ತು ಐಸ್‌ಕ್ರೀಂ ಮೇಕರ್ ಇಲ್ಲದೆಯೂ ತಯಾರಿಸಬಹುದಾಗಿದೆ.
* 2 ಕಪ್ ಹಾಲಿನ ಕೆನೆ
* 1 ಕಪ್ ಫುಲ್ ಕ್ರೀಮ್ ಹಾಲು
* 3/4 ಕಪ್ ಸಕ್ಕರೆ
* 1 ಚಮಚ ವೆನಿಲ್ಲಾ ಎಸೆನ್ಸ್
* 1/2 ಕಪ್ ಟೂಟಿ ಫ್ರೂಟಿ (ಒಣಗಿದ ಹಣ್ಣುಗಳು)
* ಒಂದು ಚಿಟಿಕೆ ಉಪ್ಪು
* ಕೆಂಪು ಅಥವಾ ಹಳದಿ ಫುಡ್ ಕಲರ್ (ಬೇಕಾದಲ್ಲಿ)
ಮೊದಲು ಒಂದು ಬಟ್ಟಲಿಗೆ ಹಾಲಿನ ಕೆನೆ, ಹಾಲು, ಸಕ್ಕರೆ, ವೆನಿಲ್ಲಾ ಎಸೆನ್ಸ್, ಹಾಗೂ ಒಂದು ಚಿಟಿಕೆ ಉಪ್ಪು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವ ಹಾಗೆ ಮಿಕ್ಸ್ ಮಾಡಬೇಕು. ನಂತರ, ಅದಕ್ಕೆ ಐಚ್ಚಿಕವಾಗಿ ಫುಡ್ ಕಲರ್ ಬೆರೆಸಿ. ಈಗ ಆ ಮಿಶ್ರಣಕ್ಕೆ ಟೂಟಿ ಫ್ರೂಟಿ ತುಂಡುಗಳನ್ನು ಸೇರಿಸಿ. ಈಗ ಐಸ್‌ಕ್ರೀಂ ಮೇಕರ್ ಅಥವಾ ಡಬ್ಬದಲ್ಲಿ ಈ ಮಿಶ್ರಣವನ್ನು ಸುರಿದು 1-2 ಗಂಟೆಗಳ ತನಕ ಫ್ರಿಜ್ನಲ್ಲಿಟ್ಟು, 40 ನಿಮಿಷಗಳಿಗೊಮ್ಮೆ ಚಮಚದಲ್ಲಿ ಕಲಸಿರಿ ಹೀಗೆ 2 ಬಾರಿ ಮಾಡಿ ನಂತರ ಕೂಲ್ ಆಗಲು ಬಿಡಿ. ಇದಾದ ಬಳಿಕ ರುಚಿಕರವಾದ ಟೂಟಿ ಫ್ರೂಟಿ ಐಸ್‌ಕ್ರೀಂ ಸೇವಿಸಿ..
(ಏಜೆನ್ಸೀಸ್)