Tongue Splitting : ಟ್ಯಾಟೂ ಪಾರ್ಲರ್ ನೆಪದಲ್ಲಿ ನಾಲಿಗೆ ವಿಭಜನೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವ್ಯಕ್ತಿ ಹಾಗೂ ಆತನ ಸಹಾಯಕನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಂದಿನ ಯುವ ಜನಾಂಗದಲ್ಲಿ ಈ ವಿಚಿತ್ರ ಟ್ರೆಂಡ್ ಹೆಚ್ಚಾಗುತ್ತಿರುವ ಕಳವಳಕ್ಕೆ ಕಾರಣವಾಗಿದೆ.
ಬಂಧಿತರನ್ನು ಹರಿಹರನ್ ಮತ್ತು ಸಹಾಯಕ ಜಯರಾಮನ್ ಎಂದು ಗುರುತಿಸಲಾಗಿದೆ. ಹರಿಹರನ್ ತಿರುಚಿರಾಪಳ್ಳಿಯಲ್ಲಿ ಟ್ಯಾಟೂ ಪಾರ್ಲರ್ ನಡೆಸುತ್ತಿದ್ದರು. ಹೆಸರಿಗೆ ಮಾತ್ರ ಅದು ಟ್ಯಾಟೂ ಪಾರ್ಲರ್ ಆಗಿತ್ತು. ಆದರೆ, ಅಲ್ಲಿ ನಾಲಿಗೆ ವಿಭಜನೆ ಶಸ್ತ್ರಚಿಕಿತ್ಸೆ ನಡೆಯುತ್ತಿತ್ತು. ಹಲವಾರು ಯುವಕರು ಸರ್ಜರಿ ಮಾಡಿಸಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಟ್ಯಾಟೂ ಪಾರ್ಲರ್ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದ ನಂತರ ಅದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳುವುದಲ್ಲದೆ ನಾಲಿಗೆಯ ತುದಿಯನ್ನು ಸೀಳುವುದು ಈಗ ಯುವಕರಲ್ಲಿ ಟ್ರೆಂಡ್ ಆಗಿಬಿಟ್ಟಿದೆ ಎನ್ನುತ್ತಾರೆ ಪೊಲೀಸರು.
ಇದನ್ನೂ ಓದಿ: ಈ 5 ಸ್ಥಳಗಳಿಗೆ ಭೇಟಿ ನೀಡುವಾಗ ಬರಿಗೈಯಲ್ಲಿ ಹೋಗಲೇಬೇಡಿ… ಹೋದ್ರೆ ದುರಾದೃಷ್ಟ ವಕ್ಕರಿಸುತ್ತೆ! Bad Luck
ಇನ್ನು ಯುವಜನರು ಈ ಕಲ್ಪನೆಯನ್ನು ಹೊರ ದೇಶಗಳಲ್ಲಿ ನೋಡಿ ಪ್ರಭಾವಿರಾಗಿದ್ದಾರೆ. ನಾಲಿಗೆಯ ತುದಿಯನ್ನು ಎರಡಾಗಿ ಸೀಳು ಮಾಡಲು ಅನೇಕರು ಆಸಕ್ತಿ ವಹಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಹರಿಹರನ್, ತಮ್ಮ ಪಾರ್ಲರ್ನಲ್ಲಿ ನಾಲಿಗೆ ಸೀಳುವ ಸರ್ಜರಿ ಮಾಡಲು ಪ್ರಾರಂಭಿಸಿದರು.
ಅಂದಹಾಗೆ ಇಂತಹ ವಿಧಾನಗಳು ಜೀವಕ್ಕೆ ಅಪಾಯವನ್ನು ಉಂಟು ಮಾಡುತ್ತದೆ. ಹೀಗಾಗಿ ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)