ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಕರೊನಾ ಸೋಂಕಿತರಿಗಿಂತ ಸೋಂಕಿನಿಂದ ಮುಕ್ತರಾಗಿ ಬಿಡುಗಡೆ ಆಗಿರುವವರೇ ಹೆಚ್ಚಾಗಿರುವುದು ಕೋವಿಡ್-19 ಬುಲೆಟಿನ್ನಲ್ಲಿ ಕಂಡುಬಂದಿದೆ.
ಮಂಗಳವಾರ ಒಂದೇ ದಿನ ರಾಜ್ಯದಲ್ಲಿ 9,993 ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಪ್ರಮಾಣ 6,57,705ಕ್ಕೆ ಏರಿದೆ. ಆದರೆ ಒಂದೇ ದಿನದಲ್ಲಿ 10,228 ಮಂದಿ ಸೋಂಕುಮುಕ್ತರಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ ಇದುವರೆಗೆ ಕರೊನಾದಿಂದ ಗುಣವಾದವರ ಪ್ರಮಾಣ 5,33,074ಕ್ಕೆ ತಲುಪಿದೆ.
ಮತ್ತೊಂದೆಡೆ 1,15,151 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ 848 ಮಂದಿ ಗಂಭೀರ ಸ್ಥಿತಿಯಲ್ಲಿದ್ದು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಸರದ ಸಂಗತಿ ಎಂದರೆ ಮಂಗಳವಾರ ಒಂದೇ ದಿನ 91 ಮಂದಿ ಕರೊನಾಗೆ ಬಲಿಯಾಗಿದ್ದು, ಇದುವರೆಗೆ ಒಟ್ಟು 9461 ಮಂದಿ ಕರೊನಾದಿಂದಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Video | ಏನಾಶ್ಚರ್ಯ.. ದೇವಿಯ ಮುಖದಲ್ಲಿ ಶಿವನ ಸ್ವರೂಪ!