ನ್ಯೂಸ್

ಇಂದು ಉಪ ಚುನಾವಣೆ; ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ಗೆ ಪ್ರತಿಷ್ಠೆಯ ಸಮರ

ಬೆಂಗಳೂರು: ಆಡಳಿತಾರೂಢ ಬಿಜೆಪಿ ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೂ ಪ್ರತಿಷ್ಠೆಯ ಸಮರವಾಗಿ ಮಾರ್ಪಟ್ಟಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಗೆ ಅಖಾಡ ಸಜ್ಜಾಗಿದೆ. ಎರಡೂ ಕ್ಷೇತ್ರಗಳಲ್ಲಿ ಮಂಗಳವಾರ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಶಾಂತಿಯುತ ಮತದಾನದ ಸಂಕಲ್ಪ ತೊಟ್ಟು ಹದ್ದಿನ ಕಣ್ಣಿಟ್ಟಿದೆ. ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರವನ್ನು ಗಟ್ಟಿಗೊಳಿಸುವುದು ಬಿಜೆ ಪಿಯ ಆಶಯವಾಗಿದ್ದರೆ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಪಕ್ಷದ್ರೋಹ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕಾಂಗ್ರೆಸ್​ನ ಪ್ರತಿತಂತ್ರವಾಗಿದೆ. ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಬಳಿಕ ಬಂದಿರುವ ಈ ಮೊದಲ ಚುನಾವಣೆ ಗೆಲ್ಲುವುದು ಡಿ.ಕೆ.ಶಿವಕುಮಾರ್ ಪಾಲಿಗೂ ಪ್ರತಿಷ್ಠೆಯಾಗಿದೆ. ರಾಷ್ಟ್ರೀಯ ಪಕ್ಷಗಳ ನೇರ ಹಣಾಹಣಿ ನಡುವೆಯೂ ಗೆಲುವು ಸಾಧಿಸುವುದು ಜೆಡಿಎಸ್​ನ ತಂತ್ರಗಾರಿಕೆಯಾಗಿದೆ.

ಭವಿಷ್ಯದ ದಿಕ್ಸೂಚಿ

  • ಬಿಜೆಪಿಗೆ ಮುಂಬರುವ ಬಿಬಿಎಂಪಿ, ಗ್ರಾ.ಪಂ ಚುನಾವಣೆ ಎದುರಿಸುವುದಕ್ಕೆ ಈ ಗೆಲುವು ಅತ್ಯಗತ್ಯ
  • ಮುಂಬರುವ ಸಾರ್ವತ್ರಿಕ ಚುನಾವಣೆಗೆ ಜನಾಭಿಪ್ರಾಯ ತಮ್ಮ ಪರ ಇದೆ ಎಂಬುದನ್ನು ತೋರಿಸುವುದು, ಡಿಕೆಶಿ ಸಾಮರ್ಥ್ಯ ಪ್ರದರ್ಶನಕ್ಕಾಗಿ ಕಾಂಗ್ರೆಸ್​ಗೆ ಗೆಲುವು ಅನಿವಾರ್ಯ
  • ಒಕ್ಕಲಿಗರು ಪಕ್ಷದ ಜತೆಯಲ್ಲೇ ಇದ್ದಾರೆ, ಪಕ್ಷದ ಬಲ ಕುಂದಿಲ್ಲ ಎಂಬುದನ್ನು ನಿರೂಪಿಸುವ ಸವಾಲು ಜೆಡಿಎಸ್​ಗೆ