ನ್ಯೂಸ್

ಮನುಷ್ಯರ ಉಳಿವಿಗೆ ಮತ್ಸ್ಯಬಲಿ..! ಐದು ಲಕ್ಷ ಶಾರ್ಕ್​ಗಳಿಗೆ ಡೆಡ್ಲಿ ಶಾಕ್​!?

ವಾಷಿಂಗ್ಟನ್: ಪ್ರಪಂಚದ ಅಷ್ಟೂ ಜನರು ಕರೊನಾ ಸೋಂಕಿನಿಂದಾಗುವ ಮರಣದಿಂದ ಪಾರಾಗಬೇಕೆಂದರೆ ದೊಡ್ಡಮಟ್ಟದಲ್ಲಿ ಮತ್ಸ್ಯಬಲಿ ಆಗಬೇಕಿದೆ. ಅಂದರೆ ಜಗತ್ತಿನಾದ್ಯಂತ ವಿತರಿಸುವಷ್ಟು ಕರೊನಾ ಔಷಧ ತಯಾರಿಸಲಿಕ್ಕಾಗಿ ಭಾರಿ ಪ್ರಮಾಣದಲ್ಲಿ ಶಾರ್ಕ್ ಮೀನುಗಳ ಸಂಹಾರ ನಡೆಯಲಿದೆಯಂತೆ. ಇದು ಕನಿಷ್ಠ 5 ಲಕ್ಷ ಶಾರ್ಕ್ ಮೀನುಗಳಿಗೆ ಡೆಡ್ಲಿ ಶಾಕ್​ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಕರೊನಾ ಔಷಧಕ್ಕೆ ರೋಗ ನಿರೋಧಕ ಗುಣವಿರುವ ಶಾರ್ಕ್ ಮೀನಿನ ಎಣ್ಣೆಯನ್ನು (ಸ್ಕ್ವಾಲೀನ್) ಬಳಸಿಕೊಳ್ಳಲಾಗುತ್ತದೆ. ವಿಶ್ವದ ಪ್ರತಿಯೊಬ್ಬರಿಗೆ ಒಂದು ಡೋಸೇಜ್ ಔಷಧ ನೀಡುವುದಕ್ಕೆ ಅಂದಾಜು ಎರಡೂವರೆ ಲಕ್ಷ ಶಾರ್ಕ್ ಮೀನುಗಳ ಎಣ್ಣೆ ಬೇಕಾಗುತ್ತದೆ.

ಕರೊನಾ ಔಷಧವು ಎರಡು ಡೋಸೇಜ್‌ನಲ್ಲಿ ಬರುವ ಸಾಧ್ಯತೆ ಇರುವುದರಿಂದ ಒಟ್ಟು ಸುಮಾರು 5 ಲಕ್ಷ ಶಾರ್ಕ್ ಮೀನುಗಳ ಜೀವ ತೆಗೆಯಬೇಕಾಗಬಹುದು ಎಂದು ಕ್ಯಾಲಿಫೋರ್ನಿಯಾದ ಶಾರ್ಕ್ ಅಲೈಸ್ ಗ್ರೂಪ್ ತಿಳಿಸಿದೆ. (ಏಜೆನ್ಸೀಸ್​)